ಮಂಗಳೂರು: ಮಂಗಳೂರಿನ ದೇರಳಕಟ್ಟೆ ಬಳಿಯ ಗುಡ್ಡ ಕುಸಿತದ ಭಯಾನಕ ಘಟನೆ ಮೂಡಿದ್ದು, ಮನೆಯೊಂದರ ಮೇಲೆ ಗುಡ್ಡ ಕುಸಿದ ಪರಿಣಾಮ ಮಹಿಳೆ ಮತ್ತು ಬಾಲಕಿ ಮೃತಪಟ್ಟಿದ್ದಾರೆ.
ಈ ದುರ್ಘಟನೆಯಲ್ಲಿ ನಯೀಮ (10) ಮತ್ತು ಪ್ರೇಮ ಪೂಜಾರಿ (60) ಮೃತರಾದವರು. ಮುಗಿಲು ಹರಿದಂತೆ ಸುರಿದ ಭಾರಿ ಮಳೆಯಿಂದಾಗಿ ದೇರಳಕಟ್ಟೆ ಸಮೀಪದ ಕಾನಕೆರೆ ಮತ್ತು ಮೊಂಟೆಪದವು ಕೋಡಿ ಎಂಬೆಡೆ ಈ ಅಪಘಾತಗಳು ಸಂಭವಿಸಿದೆ. ಈ ಸಂದರ್ಭದಲ್ಲಿ ಒಂದೇ ಕುಟುಂಬದ ಮಕ್ಕಳು ಹಾಗೂ ಅವರ ತಾಯಿ ಮನೆಯ ಅವಶೇಷಗಳ ಅಡಿಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಮಕ್ಕಳಲ್ಲಿ ಒಬ್ಬರು ಸ್ಥಳದಲ್ಲೇ ಸಾವನ್ನಪ್ಪಿದರೆ, ಇನ್ನೊಬ್ಬನು ತಾಯಿಯ ಕೈ ಹಿಡಿದ ಸ್ಥಿತಿಯಲ್ಲಿ ಪ್ರಜ್ಞಾಹೀನವಾಗಿದ್ದಾನೆ.
ಘಟನೆ ವಿವರ:
ಮೊಂಟೆಪದವು ಕೋಡಿಯಲ್ಲಿ ಸುರಿದ ಭಾರೀ ಮಳೆಗೆ ಗುಡ್ಡ ಕುಸಿದು ಕಾಂತಪ್ಪ ಪೂಜಾರಿಯವರ ಮನೆ ಮೇಲೆ ಬಿದ್ದುದು. ಈ ಅವಘಡದಲ್ಲಿ ಒಂದೇ ಕುಟುಂಬದ ಐವರು ಒಳಗೆ ಸಿಲುಕಿದ್ದರು. ಇವರಲ್ಲಿ ಪ್ರೇಮ ಪೂಜಾರಿ ಎಂಬ ಮಹಿಳೆ ಅಸ್ಥಳದಲ್ಲಿಯೇ ಮೃತರಾದರು.
ಘಟನಾ ಸ್ಥಳಕ್ಕೆ ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳು ತ್ವರಿತವಾಗಿ ಧಾವಿಸಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಈಗಾಗಲೇ ಕಾಂತಪ್ಪ ಪೂಜಾರಿ (65) ಅವರನ್ನು ಸುರಕ್ಷಿತವಾಗಿ ಹೊರತೆಗೆಯಲಾಗಿದ್ದು, ಅಶ್ವಿನಿ (31), ಆರ್ಯನ್ (2.5) ಮತ್ತು ಆರುಶ್ (1) ರಕ್ಷಣೆಯ ಕಾಗಿ ಕಾರ್ಯ ಮುಂದುವರಿದಿದೆ. ತಾಯಿ ಮತ್ತು ಮಕ್ಕಳಿಗೆ ಆಕ್ಸಿಜನ್ ಪೂರೈಕೆ ಮಾಡಲಾಗುತ್ತಿದ್ದು, ಇಬ್ಬರಲ್ಲಿ ಒಬ್ಬ ಮಗು ಪ್ರಜ್ಞೆ ಇಲ್ಲದ ಸ್ಥಿತಿಯಲ್ಲಿದೆ.
ಕಾಂಪೌಂಡ್ ಕುಸಿತದಿಂದ ಬಾಲಕಿ ಸಾವು:
ಇನ್ನೊಂದೆಡೆ, ಕಾನಕೆರೆ ಪ್ರದೇಶದಲ್ಲಿ ನೌಶಾದ್ ಎಂಬವರ ಮನೆಯ ಹಿಂಭಾಗದ ಕಾಂಪೌಂಡ್ ಧಾರಾಕಾರ ಮಳೆಯಿಂದ ಕುಸಿದಿದೆ. ಮಣ್ಣು ಮನೆ ಮೇಲೆ ಬಿದ್ದ ಪರಿಣಾಮ, ಒಂದು ಕಿಟಕಿ ಬಾಲಕಿ ಮೇಲೆ ಬಿದ್ದು ತೀವ್ರ ಗಾಯಗೊಂಡಳು. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾದರೂ ಚಿಕಿತ್ಸೆ ಫಲಕಾರಿಯಾಗದೇ ಅಲ್ಪವಯಸ್ಕಳು ಕೊನೆಯುಸಿರೆಳೆದಳು.




m
