Featured, ಅಂಕಣ, ಲೇಖನ, ಸ್ಥಳೀಯ

ಕೊಲೆಗಾರನ ತಂದೆಯ ದೇಹದಲ್ಲಿ ಕೊಲೆಗೀಡಾದ ರಹ್ಮಾನ್ ರಕ್ತ!

ಕೊಲೆಗಾರ ದೀಪಕ್ ಮನೆ ನಿರ್ಮಾಣಕ್ಕೆ ರಹ್ಮಾನ್ ಎರಡು ಲೋಡ್ ಮರಳು ಉಚಿಯವಾಗಿಯೇ ನೀಡಿದ್ದ!

ಮತೀಯ ದ್ವೇಷವನ್ನು ಯಾವ ಬೆಲೆತೆತ್ತಾದರು ವಿರೋಧಿಸಬೇಕು: ನವೀನ್ ಸೂರಿಂಜೆ

– ಹಿಂದುತ್ವವಾದಿ ಕೊಲೆಗಾರ ದೀಪಕ್ ಎಂಬಾತನ ತಂದೆ ವಿದ್ಯುತ್ ಶಾಕ್ ಹೊಡೆದು ಐಸಿಯು ನಲ್ಲಿ ಇದ್ದಾಗ ರಕ್ತದಾನ ಮಾಡಿದ್ದು ಅಬ್ದುಲ್ ರೆಹಮಾನ್. ರಕ್ತ ಸಾಲದೇ ಇದ್ದಾಗ ಊರಿನ ಮುಸ್ಲಿಂ ಯುವಕರನ್ನು ಒಟ್ಟುಗೂಡಿಸಿ ರಕ್ತ ದಾನ ಮಾಡಿಸಿದ್ದರು. ಕೊಲೆಗಾರ ದೀಪಕ್ ನ ತಂದೆಯ ದೇಹದಲ್ಲಿ ಅಬ್ದುಲ್ ರೆಹ್ಮಾನ್ ರಕ್ತವಿತ್ತು. ಆದರೂ ಹಿಂದುತ್ವ ಸಂಘಟನೆಗಳ ಪ್ರಚೋದನೆಗೆ ಒಳಗಾದ ದೀಪಕ್, ಅಬ್ದುಲ್ ರೆಹ್ಮಾನ್ ನನ್ನು ತನ್ನ ಮನೆಗೇ ಕರೆಸಿಕೊಂಡು ಕೊಂದ ಬಿಟ್ಟ.

– ಹಿಂದುತ್ವವಾದಿ ಕೊಲೆಗಾರ ದೀಪಕ್ ಮನೆ ಕಟ್ಟುತ್ತಿದ್ದ. ಆ ಮನೆಗೆ ಉಚಿತವಾಗಿ ರೆಹ್ಮಾನ್ ಎರಡು ಲೋಡ್ ಮರಳು ಹಾಕಿದ್ದ. ಕೊಲೆಯಾದ ದಿನ ಕೊಲೆ ಮಾಡಲೆಂದೇ ‘ಅರ್ಜೆಂಟ್ ಮರಳು ಬೇಕು’ ಎಂದು ಕರೆ ಮಾಡಿದ್ದ. ತನ್ನ ಮನೆ ಬಳಕೆಗೆಂದು ಇಟ್ಟಿದ್ದ ಮರಳನ್ನು ಲೋಡ್ ಮಾಡಿಕೊಂಡು ದೀಪಕ್ ನ ಮನೆಗೆ ಹೋಗಿ ಅನ್ಲೋಡ್ ಮಾಡುತ್ತಿದ್ದಾಗ ದೀಪಕ್ ಕೊಲೆ ಮಾಡಿದ.

ಕರಾವಳಿಯ ದೇವಸ್ಥಾನ, ದೈವಸ್ಥಾನ, ಶೋಭಾಯಾತ್ರೆಗಳಲ್ಲಿ ಅಬ್ದುಲ್ ರೆಹ್ಮಾನ್ ಮಾಡಿದ ಸೌಹಾರ್ದತೆಯ ‘ಅಳಿಲ ಸೇವೆ’ ಸಾಕಷ್ಟಿದೆ. ಈ ಸಮಾಜ ಸೇವೆಗಳನ್ನು ಬದಿಗಿಟ್ಟು ನೋಡಿದರೂ ಅಬ್ದುಲ್ ರೆಹ್ಮಾನ್ ವೈಯುಕ್ತಿಕವಾಗಿ ಮಾನವೀಯ ಅಂತಃಕರಣವುಳ್ಳ ವ್ಯಕ್ತಿ. ಕೊಲೆಗಾರನ ತಂದೆಯ ಜೀವ ಉಳಿಸುವುದರಿಂದ ಹಿಡಿದು ಮನೆ ಕಟ್ಟುವುದರವರೆಗೂ ನೆರವಾಗಿದ್ದ. ಆದರೂ ಅಬ್ದುಲ್ ರೆಹ್ಮಾನ್ ಕೊಲೆಯಾದರು. ಕೋಮುವಾದ ಅನ್ನೋದು ರಕ್ತ ಹಂಚಿದವನನ್ನೇ ಕೊಲೆ ಮಾಡಿಸುತ್ತೆ. ಆ ಕಾರಣಕ್ಕಾಗಿ ನಾವು ಮತೀಯ ದ್ವೇಷವನ್ನು ಯಾವ ಬೆಲೆ ತೆತ್ತಾದರೂ ವಿರೋಧಿಸಬೇಕು.

ನವೀನ್ ಸೂರಿಂಜೆ

m

Related Posts