Featured, ಅಂಕಣ, ಸ್ಥಳೀಯ

SBS ಗೂನಡ್ಕ ಯುನಿಟ್ ವತಿಯಿಂದ ಮಾದಕ ದ್ರವ್ಯದ ವಿರುದ್ದ ಅಭಿಯಾನ “ಸ್ನೇಹ ಸಹವಾಸ” ಏಕದಿನ ಶಿಬಿರ

SBS ಗೂನಡ್ಕ ಯುನಿಟ್ ವತಿಯಿಂದ ಮಾದಕ ದ್ರವ್ಯದ ವಿರುದ್ದ ಅಭಿಯಾನ “ಸ್ನೇಹ ಸಹವಾಸ” ಎಂಬ ಏಕದಿನ ಶಿಬಿರವು ಗೂನಡ್ಕ ಬದ್ರಿಯಾ ಜುಮಾ ಮಸೀದಿಯ ಅಧೀನದ ಹಯಾತುಲ್ ಇಸ್ಲಾಂ ಮದರಸದಲ್ಲಿ ಜೂನ್ 1 ರಂದು ಜರುಗಿತು.

ಮಸೀದಿಯ ಖತೀಬರಾದ ಬಹು.ಅಬೂಬಕ್ಕರ್ ಸಿದ್ದೀಕ್ ಸಖಾಫಿ ಅಲ್ ಅರ್ಶದಿಯವರು ಪ್ರಾಸ್ತಾವಿಕವಾಗಿ ಮಾತನಾಡಿ, ಮುಅಲ್ಲಿಂ ಬಹು.ಸವಾದ್ ಮದನಿಯವರು ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಬದ್ರಿಯಾ ಜುಮಾ ಮಸೀದಿ ಗೂನಡ್ಕ ಇದರ ಅಧ್ಯಕ್ಷರಾದ ಮಹಮ್ಮದ್ ಕುಂಞಿ ಗೂನಡ್ಕರವರು ಮಾತನಾಡಿ “ಪ್ರಸ್ತುತ ವಿದ್ಯಾರ್ಥಿಗಳು ಸೇರಿದಂತೆ ಯುವ ಸಮೂಹವು ಮಾದಕ ವ್ಯಸನಕ್ಕೆ ಒಳಗಾಗುತ್ತಿರುವುದು ಗಂಭೀರ ವಿಷಯವಾಗಿದೆ, ವಿದ್ಯಾರ್ಥಿಗಳು ಇದರ ಬಗ್ಗೆ ಬಹಳ ಎಚ್ಚರಿಕೆಯಿಂದ ಇರಬೇಕು, ಮಾದಕ ವ್ಯಸನಿಗಳಾದರೆ ಅದರಿಂದ ಹೊರಬರಲು ಬಹಳ ಕಷ್ಟವಿದೆ, ಅಂತಹವರಿಗೆ ಸಾಮಾಜಿಕವಾಗಿ ಯಾವುದೇ ಗೌರವವು ಇರುವುದಿಲ್ಲ, ನಿಮ್ಮ ಭವಿಷ್ಯದ ದೃಷ್ಠಿಯಿಂದ ಮಾದಕ ವ್ಯಸನಿಗಳಾಗದೆ, ಭವಿಷ್ಯದಲ್ಲಿ ವಿದ್ಯಾವಂತ ಉತ್ತಮ ಪ್ರಜೆಗಳಾಗಿ ಬಾಳಲು ನಿಮ್ಮ ಗುರಿಯನ್ನು ಹೊಂದಿರಬೇಕೆಂದು” ಅವರು ಹೇಳಿದರು.

ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯರುಗಳಾದ ಪಿ.ಕೆ.ಅಬೂಸಾಲಿ ಗೂನಡ್ಕ ಹಾಗೂ ಶೌವಾದ್ ಗೂನಡ್ಕರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಇತ್ತೀಚೆಗೆ ಮದನಿ ಬಿರುದನ್ನು ಪಡೆದ ಬಹು.ಸವಾದ್ ಮದನಿಯವರನ್ನು ಈ ಸಂದರ್ಭ ಅಭಿನಂದಿಸಲಾಯಿತು.

ಗೂನಡ್ಕ ಬದ್ರಿಯಾ ಜುಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಎಸ್.ಎ.ಅಶ್ರಫ್ ದೊಡ್ಡಡ್ಕ, ಮಾಜಿ ಅಧ್ಯಕ್ಷರಾದ ಹಾಜಿ ಪಿ.ಎ.ಉಮ್ಮರ್ ಗೂನಡ್ಕ, ಗೂನಡ್ಕ ಯುನಿಟ್ ನ SYS ಅಧ್ಯಕ್ಷರಾದ ಮುನೀರ್ ಪ್ರಗತಿ, SSF ಅಧ್ಯಕ್ಷರಾದ ಉನೈಸ್ ಗೂನಡ್ಕ, SBS ಅಧ್ಯಕ್ಷರಾದ ಅನಸ್ ಡಿ.ಎಂ ಹಾಗೂ ಆರೀಫ್ ಟಿ.ಎ. ಈ ವೇಳೆ ಉಪಸ್ಥಿತರಿದ್ದರು.

SBS ಪದಾಧಿಕಾರಿ ಶಹನವಾಜ್ ಕುಂಭಕ್ಕೋಡ್ ಗೂನಡ್ಕ ಸ್ವಾಗತಿಸಿದರು.

m

Related Posts