Featured, ಅಂಕಣ, ಸ್ಥಳೀಯ

ಹಯಾತುಲ್ ಇಸ್ಲಾಂ ಮದ್ರಸ ಜಾಲ್ಸೂರು ಟೌನ್

SBS ವಾರ್ಷಿಕ ಮಹಾಸಭೆ ಹಾಗೂ ನೂತನ ಸಮಿತಿ ರಚನೆ…

ಜಾಲ್ಸೂರು: ಹಯಾತುಲ್ ಇಸ್ಲಾಂ ಮದ್ರಸ ಜಾಲ್ಸೂರು ಟೌನ್ (2206) ಇಲ್ಲಿನ ವಿದ್ಯಾರ್ಥಿಗಳ ಸಂಘಟನೆಯಾದ SBS ಇದರ 2025-26 ನೇ ಸಾಲಿನ ವಾರ್ಷಿಕ ಮಹಾಸಭೆಯು ಸದರ್ ಉಸ್ತಾದರಾದ ಜುನೈದ್ ಹಿಮಮಿ ಸಖಾಫಿ ಉಸ್ತಾದರ ಅಧ್ಯಕ್ಷತೆಯಲ್ಲಿ ದಿನಾಂಕ 17-05-2025 ಶನಿವಾರ ಬೆಳಿಗ್ಗೆ 7:30 ಕ್ಕೆ ನಡೆಯಿತು.ಉಸ್ತಾದರ ದುಆದೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ ವಿಧ್ಯಾರ್ಥಿ ಅಮ್ಮಾರ್ ಮುಹಮ್ಮದ್ ಕಿರಾಅತ್ ಪಠಿಸಿದರು. ಮುಹಮ್ಮದ್ ಸಲೀತ್ ಸ್ವಾಗತ ಭಾಷಣ ನಡೆಸಿದರು. ಅಧ್ಯಾಪಕರಾದ ಸ್ವಾದಿಕ್ ಫಾಳಿಲಿ ಉಸ್ತಾದರು ಕಾರ್ಯಕ್ರಮವನ್ನು ಉದ್ಘಾಟಿಸಿದರು. SBS ಪ್ರ. ಕಾರ್ಯದರ್ಶಿಯವರು ಕಳೆದ ಸಾಲಿನ ವಾರ್ಷಿಕ ವರದಿ ಮಂಡಿಸಿದರು. ಬಳಿಕ ನಡೆದ ನೂತನ ಆಯ್ಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ಮುಹಮ್ಮದ್ ಆಸಿಫ್, ಪ್ರ. ಕಾರ್ಯದರ್ಶಿಯಾಗಿ ಲುತುಫಿ ರಫೀಕ್ ಅಬ್ದುಲ್ಲ ಹಾಗೂ ಕೋಶಾಧಿಕಾರಿಯಾಗಿ ಮುಹಮ್ಮದ್ ಸಹೂದ್ ರವರನ್ನು ಹಾಗೂ ಮದ್ರಸಾ ನಾಯಕನಾಗಿ ಅಮ್ಮಾರ್ ಮುಹಮ್ಮದ್ ರವರನ್ನು ಆಯ್ಕೆಮಾಡಲಾಯಿತು. ಬಳಿಕ ನಡೆದ ಸಭೆಯಲ್ಲಿ ಉಳಿದ ಸ್ಥಾನಗಳಿಗೂ ಆಯ್ಕೆ ಪ್ರಕ್ರಿಯೆ ನಡೆಯಿತು. ಕಾರ್ಯಕ್ರಮದ ಕೊನೆಯಲ್ಲಿ ಸರ್ವರಿಗೂ ಸಿಹಿಹಂಚಿ ,ಸ್ವಲಾತ್, ಸಲಾಮಿನೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.

m

Related Posts