ಸಮಸ್ತ ಕೇರಳ ಇಸ್ಲಾಂ ಮತ ವಿಧ್ಯಾಭ್ಯಾಸ ಬೋಡ್೯ ಇದರ ಅಧೀನದಲ್ಲಿ ಕಾರ್ಯಾಚರಿಸುವ ಸುರಲ್ಪಾಡಿ ರೇಂಜಿಗೊಳಪಟ್ಟ ಮಾಅದನುಲ್ ಉಲೂಂ ಮದರಸ ಮಳಲಿಯಲ್ಲಿ SKSBV ವತಿಯಿಂದ ಗ್ರಾಂಡ್ ಅಸೆಂಬ್ಲಿ ಹಾಗು ಬೃಹತ್ ಸಂದೇಶ ಜಾಥಾ ನಡೆಯಿತು. ಖತೀಬರಾದ ಮುಸ್ತಫಾ ಫೈಝಿ ಪಾತೂರು ದುವಾ ನೆರವೇರಿಸಿ ಉದ್ಘಾಟಿಸಿದರು. ಜಮಾಅತ್ ಅಧ್ಯಕ್ಷರಾದ ಅಬ್ದುಲ್ ರಝಾಕ್ ಮಳಲಿಯವರ ಅಧ್ಯಕ್ಷತೆ ವಹಿಸಿ ಸದರ್ ಮುಅಲ್ಲಿಂ ಎನ್.ಎ.ಅಬ್ದುಲ್ ಖಾದರ್ ಯಮಾನಿ ಸಂದೇಶ ಬಾಷಣ ಮಾಡಿದರು. ಮದ್ರಸ ಅಧ್ಯಾಪಕರಾದ ಸಿರಾಜುದ್ದೀನ್ ಅಝ್ಹರಿ ಪ್ರತಿಜ್ಞೆ ವಾಚನೆ ಮಾಡಿ ಮುಸ್ತಫಾ ಅರ್ಶದಿ ಜಾಥಾ ಪ್ರಾರಂಭಿಸಿದರು.ಜಮಾಅತ್ ಕೋಶಾಧಿಕಾರಿ ಅಬ್ಬಾಸ್ ನಾಡಜೆ ತಂಪು ಪಾನೀಯ ವಿತರಣೆ ಮಾಡಿ ಮದ್ರಸ ಉಸ್ತುವಾರಿ ಅಬ್ದುಲ್ ಅಝೀಝ್ ಮುಳ್ಳಗುಡ್ಡೆ, ಜೊತೆ ಕಾರ್ಯದರ್ಶಿ ಹಮೀದ್ ಕಟ್ಟೆ,ಗ್ರೀನ್ ಸ್ಟಾರ್ ಕ್ಲಬ್ಉ ಅಧ್ಯಕ್ಷರಾದ ಅನ್ಸಾರ್ ಮಳಲಿ,ಇರ್ಶಾದುಲ್ ಮುಸ್ಲಿಮೀನ್ ಅಧ್ಯಕ್ಷರಾದ ಎಂ.ಎ ಮುಹಮ್ಮದ್ ಹಾಗು ಇನ್ನಿತರ ಮೊಹಲ್ಲಾ ನಿವಾಸಿಗಳು ಭಾಗವಹಿಸಿದರು.ಮುಹಮ್ಮದ್ ಯಮಾನಿ ಸ್ವಾಗತಿಸಿ ಜಮಾಅತ್ ಕಾರ್ಯದರ್ಶಿ ನವಾಝ್ ಎಂ.ಎಚ್. ವಂದಿಸಿದರು.
