ಮುಡಿಪು:ಸಂಬಾರತೋಟ ಮದ್ರಸ ವಿದ್ಯಾರ್ಥಿಗಳ ಸಂಘಟನೆಯಾದ SBS ಇದರ 2025-26 ನೇ ಸಾಲಿನ ವಾರ್ಷಿಕ ಮಹಾಸಭೆಯು ಸದರ್ ಉಸ್ತಾದರಾದ ಜಿ. ಎಚ್ ಅಬೂಬಕ್ಕರ್ ಸಖಾಫಿ ಅವರ ಅಧ್ಯಕ್ಷತೆಯಲ್ಲಿ ದಿನಾಂಕ 11-05-2025 ಆದಿತ್ಯವಾರ ಬೆಳಿಗ್ಗೆ 8:00 ಕ್ಕೆ ನಡೆಯಿತು.ಉಸ್ತಾದರ ದುಆದೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ 9th ವಿಧ್ಯಾರ್ಥಿ ಮುಝಮ್ಮಿಲ್ ಕಿರಾಅತ್ ಪಠಿಸಿ,ರಫೀಖ್ ಅಂಜದಿ ಸ್ವಾಗತ ಭಾಷಣ ನಡೆಸಿದರು. ಸದರ್ ಉಸ್ತಾದರ ಅಧ್ಯಕ್ಷೀಯ ಭಾಷಣದ ಬಳಿಕ ಅನ್ಸಾರ್ ಸಖಾಫಿ ಕಾರ್ಯಕ್ರಮವನ್ನು ಉದ್ಘಾಟಿಸಿ ನೂತನ ಸಮಿತಿ ಆಯ್ಕೆಪ್ರಕ್ರೀಯೆ ಬಗ್ಗೆ ಮಾಹಿತಿ ನೀಡಿದರು.ಸಿನಾನ್ ಸಅದಿ, ಇಕ್ಬಾಲ್ ಜೌಹರಿ, ಮುಸ್ತಫಾ ಹಂದಾನಿ ಉಸ್ತಾದರುಗಳು ಇಲೆಕ್ಷನ್ ಆಫೀಸರ್ ಗಳಾಗಿ ಕಾರ್ಯ ನಿರ್ವಹಿಸಿದರು. SBS ಕಾರ್ಯದರ್ಶಿ 9th ವಿಧ್ಯಾರ್ಥಿ ಹಸನ್ ಮಿಸ್ಹಬ್ ಕಳೆದ ಸಾಲಿನ ವಾರ್ಷಿಕ ವರದಿ ಹಾಗೂ ಪ್ರ. ಕಾರ್ಯದರ್ಶಿ 10th ವಿಧ್ಯಾರ್ಥಿ ಮುಹಮ್ಮದ್ ಫಝಲ್ ಲೆಕ್ಕ ಪತ್ರ ಮಂಡಿಸಿ ಸರ್ವಾನುಮತದಿಂದ ಅಂಗೀಕರಿಸಲಾಯಿತು.ಬಳಿಕ ನಡೆದ ನೂತನ ನಾಯಕರ ಆಯ್ಕೆ 5 ನೇ ತರಗತಿಗಿಂತ ಮೇಲ್ಪಟ್ಟ ವಿಧ್ಯಾರ್ಥಿಗಳು ಚುನಾವಣೆ ಮೂಲಕ ಆರಿಸಿದರು. ಅತ್ಯಧಿಕ ಮತ ಪಡೆದು 10 th ವಿಧ್ಯಾರ್ಥಿ ಮುಹಮ್ಮದ್ ಸಿನಾನ್ ನೂತನ ಅಧ್ಯಕ್ಷ ಹಾಗೂ ಮದ್ರಸಾ ಲೀಡರ್ ಆಗಿಯೂ, ಪ್ರ. ಕಾರ್ಯದರ್ಶಿ ಹಾಗೂ ಮದ್ರಸಾ ಉಪ ನಾಯಕನಾಗಿ 10th ವಿಧ್ಯಾರ್ಥಿ ಮುಹಮ್ಮದ್ ಫಝಲ್ ಕೋಶಾಧಿಕಾರಿಯಾಗಿ 10th ವಿಧ್ಯಾರ್ಥಿ ಮುಹಮ್ಮದ್ ಶಾಫಿ ,ವಿಧ್ಯಾರ್ಥಿನಿಗಳಲ್ಲಿ ಅತ್ಯಧಿಕ ಮತ ಪಡೆದು 10th ವಿಧ್ಯಾರ್ಥಿನಿಗಳಾದ ಖದೀಜ ಶೈಮ, ಆಯಿಷ ಆಫಿಯಾ,ಆಯಿಷ ಅಫೀಝಾ ಕ್ರಮಾನುಸಾರ ಗರ್ಲ್ಸ್ ಲೀಡರ್ಳಾಗಿ ಆಯ್ಕೆಗೊಂಡರು.ಬಳಿಕ ನಡೆದ ಸಭೆಯಲ್ಲಿ ಉಳಿದ ಸ್ಥಾನಗಳಿಗೂ ಆಯ್ಕೆ ನಡೆಯಿತು.ಕಾರ್ಯಕ್ರಮದ ಕೊನೆಯಲ್ಲಿ ಸರ್ವರಿಗೂ ಸಿಹಿಹಂಚಿ ,ಸ್ವಲಾತ್, ಸಲಾಮಿನೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.






m
