Featured, ಅಂಕಣ, ಸ್ಥಳೀಯ

“ಕಲ್ಲುಗುಂಡಿ ಶಾಲಾ ಪ್ರಾರಂಭೋತ್ಸವ: ಮೆರವಣಿಗೆಯೊಂದಿಗೆ ಶೈಕ್ಷಣಿಕ ವರ್ಷದ ಸಂಭ್ರಮದ ಶಾಲಾ ಆರಂಭ”

ದ ಕ ಜಿ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಅರ್. ಎಂ ಎಸ್. ಎ ಪ್ರೌಡ ಶಾಲೆ ಕಲ್ಲುಗುಂಡಿ ಇದರ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಕಲ್ಲುಗುಂಡಿ ಶಾಲಾ ವಠಾರದಲ್ಲಿ ಅದ್ದೂರಿಯಾಗಿ ಮೆರವಣಿಗೆ ಮೂಲಕ ಮಕ್ಕಳನ್ನು ಹಾಗು ಪೋಷಕರನ್ನು ಅತಿಥಿಗಳನ್ನು ಬರಮಾಡಿಕೊಲ್ಲಲಾಯಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಮತಿ ವಹಿಸಿ ಸರ್ವ ವಿದ್ಯಾರ್ಥಿಗಳಿಗೆ ಶುಭ ಹಾರೈಕೆ ಮಾಡಿದರೂ.ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಎಸ್ ಕೆ ಹನೀಫ್ ದೀಪ ಬೆಳಗಿಸಿ ಉದ್ಘಾಟಿಸಿ ಕಳೆದ ಎಸ್. ಎಸ್. ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ತಂದ ವಿದ್ಯಾರ್ಥಿಗಳಿಗೆ ಶುಭ ಕೋರಿದರು

ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ಹೂಗುಚ್ಚ ಹಾಗೂ ಪೆನ್ ನೀಡಿ ಸ್ವಾಗತಿಸಿದ ಮಾಜಿ ಅಧ್ಯಕ್ಷರಾದ ಜಿ. ಕೆ ಹಮೀದ್ ಗೂನಡ್ಕ ಮಾತನಾಡಿ ವಿದ್ಯಾರ್ಥಿಗಳು ಪಾಠದ ಜೊತೆಗೆ ಆಟೋಟ ಸ್ಪರ್ಧೆಗಳನ್ನು ಕಲಿತು. ಸ್ವಚ್ಚತೆಯ ಕಡೆಗೆ ಗಮನ ಹರಿಸಿ. ಕೋರೋಣ ದಂತಹ ರೋಗಗಳು ಬಾರದಂತೆ ಜಾಗೃತೆ ವಹಿಸಿ. ಮಳೆಗಾಲ ಸಂದರ್ಬದಲ್ಲಿ ವಿದ್ಯಾರ್ಥಿಗಳು ನದಿ ತೀರದಲ್ಲಿ ಮರಗಳ ಬಳಿ ಜಾಗೃತೆ ವಹಿಸಿ ಎಂದರು. ಶಾಲಾ ಎಸ್. ಡಿ. ಎಂ. ಸಿ ಅಧ್ಯಕ್ಷರಾದ ಮಹಮದ್ ಹನೀಫ್ ಮಾತನಾಡಿ ವಿದ್ಯಾರ್ಥಿಗಳು,ಪೋಷಕರು ಹಾಗೂ ಅಧ್ಯಾಪಕರು ಉತ್ತಮ ಫಲಿತಾಂಶ ತರಲು ಪ್ರಯತ್ನಿಸಿ ಎಂದರು.

ಪ್ರೌಡ ಶಾಲೆ ಮುಖ್ಯ ಗುರುಗಳಾದ ಶ್ರೀಮತಿ ಜಯಶ್ರೀ ಸ್ವಾಗತಿಸಿ.ಪ್ರಾಥಮಿಕ ಶಾಲಾ ಮುಖ್ಯ ಗುರುಗಳಾದ ಶ್ರೀಮತಿ ಚಂದ್ರಾವತಿ ವಂದಿಸಿದರು

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ಹಾಗೂ ಪಠ್ಯ ಪುಸ್ತಕ ವಿತರಿಸಲಾಯಿತು

ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಡೋಲು ಬಾರಿಸುವ ಮೂಲಕ ಬರಮಾಡಿಕೊಳ್ಳಲಾಯಿತು.

m

Related Posts