ಎರಡು ಕೆಜಿ ಮಾದಕವಸ್ತುವಿನೊಂದಿಗೆ ಯುವಕರನ್ನು ಬಂಧಿಸಿದ ಉಪ್ಪಾರ್ ಪೇಟೆ ಪೊಲೀಸರು
ಬೆಂಗಳೂರು, ಮೇ 31 – ನಗರದ ಮೆಜೆಸ್ಟಿಕ್ ಭಾಗದಲ್ಲಿ ಪೊಲೀಸರು ದಾಳಿ ನಡೆಸಿ ಎರಡು ಕೆಜಿ ಗಾಂಜಾ ವಶಪಡಿಸಿಕೊಂಡಿದ್ದು, ಈ ಸಂಬಂಧ ಇಬ್ಬರು ಯುವಕರನ್ನು ಬಂಧಿಸಿದ್ದಾರೆ. ಈ ಘಟನೆ ಶುಕ್ರವಾರ ರಾತ್ರಿ ಸುಮಾರು 10:45ರ ಸುಮಾರಿಗೆ ನಡೆದಿದೆ.
ಬಂಧಿತರಲ್ಲೊಬ್ಬರು ಸುಳ್ಯ ಮೂಲದ ಅಬ್ದುಲ್ ನವಾಜ್ ಡೆಲ್ಮ್ (27). ಇನ್ನೊಬ್ಬ ಅಲೆಕ್ಸ್ (24) ಎಂಬುದು ತಿಳಿದುಬಂದಿದ್ದು, ತ್ರಿಶೂರ್, ಕೇರಳದವರು. ಅಲೆಕ್ಸ್ ಪ್ರಸ್ತುತ ಸುಳ್ಯದ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ್ಪಾರ್ ಪೇಟೆ ಪೊಲೀಸ್ ಠಾಣೆಯಲ್ಲಿ ಕ್ರೈಂ ನಂ. 158/2025 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರೂ ಆರೋಪಿಗಳನ್ನು 5ನೇ ಹೆಚ್ಚುವರಿ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಹಾಜರುಪಡಿಸಲಾಯಿತು.
ಪೊಲೀಸರ ಮನವಿಯ ಮೇರೆಗೆ ನ್ಯಾಯಾಲಯ ಇಬ್ಬರು ಆರೋಪಿಗಳನ್ನು ಮರು ತನಿಖೆಗೆ ಸಹಕರಿಸಲು ಎರಡು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಮಾಹಿತಿ ಹೊರಬೀಳುವ ನಿರೀಕ್ಷೆಯಿದೆ.




m
