ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದ ಹಿರಿಯ ಉದ್ಯಮಿ ಎಸ್ ಅಬ್ಬುಲ್ಲಾ ಕಟ್ಟೆಕ್ಕಾರ್

“ಸೇವೆ ಮೊದಲು” (Service before Help) — ಇಂಡಿಯನ್ ಪೋಸ್ಟ್‌ನ ಧ್ಯೇಯವಾಕ್ಯ ಮೋಹನ್ ಎಮ್ ಕೆ ರವರ ವಿಚಾರದಲ್ಲಿ ಅಕ್ಷರಶಃ ನಿಜ
ಮೋಹನ್ ಎಮ್ ಕೆ ಇವರು ಸುಳ್ಯದ ಪ್ರಧಾನ ಅಂಚೆ ಕಛೇರಿಯಲ್ಲಿ ಪ್ರದಾನ ಅಂಚೆ ಪಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ
ಸರಕಾರಿ ಸೇವೆಗಳ ವಿಚಾರದಲ್ಲಿ ಸಾರ್ವಜನಿಕ ರೊಂದಿಗೆ ಬಹಳ ಅನ್ಯೋನ್ಯವಾಗಿ ಬೆರೆಯುವ ಇವರು ಇಲಾಖೆಯ ಸೇವೆಗಳ ಬಗ್ಗೆ ಸಾರ್ವಜನಿಕ ರಿಗೆ ಅರಿವು ಮೂಡಿಸುತ್ತಿದ್ದಾರೆ ಮಾತ್ರವಲ್ಲ ಜನರಿಗೆ INDIAN POST, ಹಲವಾರು ರೀತಿಯ ವಿಶೇಷ ಯೋಜನೆ ಸಾದರ ಪಡಿಸಿದೆ ಇದರ ಬಗ್ಗೆಯೂ ಜನರಿಗೆ ಮಾಹಿತಿ ನೀಡುತ್ತಿದ್ದಾರೆ ಸುಳ್ಯದಲ್ಲಿ ತಲೆದೋರಿದ ಅಧಾರ್ ಸಮಸ್ಯೆಯನ್ನು ಪರಿಹರಿಸಲು ತಮ್ಮ ಸ್ವಯಂ ಪ್ರಯತ್ನದಿಂದ ಸಂಘ, ಸಂಸ್ಥೆಗಳ ಮೂಲಕ ಅದಾರ್ ನೊಂದಣಿ ಮತ್ತು ತಿದ್ದುಪಡಿ ಶಿಬಿರ ಸಂಘಟಿಸಿ ಸಾರ್ವಜನಿಕ ರ ಸಮಸ್ಯೆಗೆ ಸ್ಪಂದಿಸುತ್ತಾರೆ. ಇಂಡಿಯಾ ಪೊಸ್ಟ್ ನ ಧ್ಯೇಯವಾಕ್ಯ “ಸೇವೆ ಮೊದಲು” ಮೋಹನ್ ರವರ ವಿಚಾರದಲ್ಲಿ ಸತ್ಯವಾಗಿದೆ..

ಸುಳ್ಯ : ಮುಸ್ಲಿಂ ಯೂತ್ ಫೆಡರೇಶನ್ ಸುಳ್ಯ ತಾಲೂಕು ಸಮಿತಿ ಇದರ ಆಶ್ರಯದಲ್ಲಿ ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ,ಇವಾರ್ತೆ ಡಿಜಿಟಲ್ ಮೀಡಿಯಾ ಇದರ ಸಹಕಾರದಿಂದ, ಜೂನ್ 13 ಮತ್ತು ಜೂನ್ 14 ರಂದು ( ಶುಕ್ರವಾರ ಮತ್ತು ಶನಿವಾರ) ಅದಾರ್ ತಿದ್ದುಪಡಿ ಮತ್ತು ನೋಂದಣಿ ಶಿಬಿರ ಯಶಸ್ವಿಯಾಗಿ ನಡೆಯಿತು

ಈ ಶಿಬಿರದ ಯಶಸ್ವಿಗೆ ಕಾರಣರಾದ ಸುಳ್ಯ ಪ್ರಧಾನ ಅಂಚೆ ಕಛೇರಿಯ ಅಂಚೆ ಪಾಲಕರಾದ ಮೊಹನ್ ಎಮ್ ಕೆ ಇವರಿಗೆ ಮುಸ್ಲಿಮ್ ಯೂತ್ ಫೆಡರೇಶನ್ ಸುಳ್ಯ ತಾಲೂಕು ಸಮಿತಿ ವತಿಯಿಂದ ಗೌರವಿಸಲಾಯಿತು, ಸುಳ್ಯ ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ಇದರ ಅಧ್ಯಕ್ಷರು, ಹಿರಿಯ ಉದ್ಯಮಿಗಳು ಆದ ಎಸ್ ಅಬ್ದುಲ ಕಟ್ಟೆಕ್ಕಾರ್ ಇವರು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು, ಇದೇ ಸಂದರ್ಭದಲ್ಲಿ. ಎರಡು ದಿನಗಳ ಕಾಲ ತಾಳ್ಮೆ ಯಿಂದ ಅದಾರ್ ನೊಂದಣಿ ಮತ್ತು ತಿದ್ದುಪಡಿ ನಡೆಸಿಕೊಟ್ಟ ಅಪರೇಟರ್, ಕೃಪೇಶ್ ಇವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು
MYF ಅಧ್ಯಕ್ಷ ಉಮ್ಮರ್ ಕೆ ಎಸ್, ಸುಳ್ಯ ಪತ್ರಕರ್ತ ಸಂಘದ ಅಧ್ಯಕ್ಷರಾದ ಶರೀಫ್ ಜಟ್ಟಿಪಳ್ಳ, ಸುಳ್ಯ ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ಇದರ ಉಪಾಧ್ಯಕ್ಷರಾದ, ಅಬ್ಬೂಬಕ್ಕರ್ ಎಸ್ ಪಿ
MYF ಇದರ ಸದಸ್ಯ ರಾದ ಇಕ್ಬಾಲ್ ಸುಣ್ಣಮೂಲೆ, ಉನೈಸ್ ಪೆರಾಜೆ, ರಶೀದ್ ಜಟ್ಟಿಪಳ್ಳ, ಇವಾರ್ತೆ ವರದಿಗಾರ ರುನೈಸ್ ಕೊಯನಾಡು,ಕಬೀರ್ ಜಟ್ಟಿಪಳ್ಳ, ಯೂಸುಫ್ ಅಂಜಿಕ್ಕಾರ್ ಮೊದಲಾದವರು ಉಪಸ್ಥಿತರಿದ್ದರು






m

