ಸವಣೂರು: ತೀವ್ರ ಮಳೆಯ ಹಾನಿ ಹಾಗೂ ಪ್ರಾಕೃತಿಕ ವಿಕೋಪಗಳಿಂದ ಜನರು, ಕೃಷಿಕರು ಹಾಗೂ ದಿನ ಕೂಲಿ ಕಾರ್ಮಿಕರು ತೀವ್ರ ಸಂಕಷ್ಟ ಅನುಭವಿಸುತ್ತಿರುವ ಈ ಹಿನ್ನಲೆಯಲ್ಲಿ, ಜಿಲ್ಲಾಡಳಿತವು ಮರಳು, ಕೆಂಪು ಗಲ್ಲು ಹಾಗೂ ಜಲ್ಲಿಕಲ್ಲಿನ ಸಾಗಾಟದ ಮೇಲೆ ವಿಧಿಸಿರುವ ನಿರ್ಬಂಧಗಳು ಸಾರ್ವಜನಿಕರಿಗೆ ಇನ್ನಷ್ಟು ತೊಂದರೆ ಉಂಟುಮಾಡಿವೆ ಎಂದು ಸವಣೂರು ಗ್ರಾಮ ಪಂಚಾಯತ್ ಸದಸ್ಯರಾದ ರಫೀಕ್ ಎಂ.ಎ ಹೇಳಿದರು.
ಗ್ರಾಮೀಣ ಭಾಗದಲ್ಲಿ ಗ್ರಾಮ ಪಂಚಾಯತ್ ಅನುದಾನದಿಂದ ನಡೆಯಬೇಕಾದ ಸಾರ್ವಜನಿಕ ಕಾಮಗಾರಿಗಳು, ಸಾಮಾನ್ಯ ಜನರ ಗೃಹ ನಿರ್ಮಾಣ ಕಾರ್ಯಗಳು ಮತ್ತು ಶಾಲಾ ಆಡಳಿತದ ಮೂಲಕ ಮಕ್ಕಳಿಗೆ ಮೂಲಭೂತ ಸೌಕರ್ಯ ಒದಗಿಸುವ ಚಿಕ್ಕಪುಟ್ಟ ಕಾಮಗಾರಿಗಳು ಕೂಡಾ ಈ ನಿರ್ಬಂಧದ ಪರಿಣಾಮವಾಗಿ ಸ್ಥಗಿತಗೊಂಡಿವೆ. ಇದರಿಂದಾಗಿ ಕೂಲಿ ಕಾರ್ಮಿಕರು ಮತ್ತು ಜನಸಾಮಾನ್ಯರ ಜೀವನಮಟ್ಟವೇ ಕುಸಿಯಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಈ ಹಿನ್ನೆಲೆಯಲ್ಲಿ, ಜಿಲ್ಲಾಡಳಿತವು ಕೂಡಲೇ ಈ ನಿರ್ಬಂಧವನ್ನು ಸಡಿಲಿಸಿ ಜನಸಾಮಾನ್ಯರ ಪರವಾಗಿ ಕಾರ್ಯನಿರ್ವಹಿಸಬೇಕೆಂದು ರಫೀಕ್ ಎಂ.ಎ ಮಾಧ್ಯಮಗಳ ಮುಖಾಂತರ ಒತ್ತಾಯಿಸಿದ್ದಾರೆ.






m
