Featured, ಅಂಕಣ, ಇತರೆ, ರಾಜ್ಯ

ಮಳೆಹಾನಿ ಸಂತ್ರಸ್ತರಿಗೆ ಪರಿಹಾರ ಬಿಡುಗಡೆ: ಯಾರು, ಯಾವ ಹಾನಿಗೆ ಎಷ್ಟು ಹಣ?

ಬೆಂಗಳೂರು, ಜೂನ್ 18: ಕರ್ನಾಟಕದ ಹಲವೆಡೆ ಈ ಬಾರಿ ಮುಂಗಾರು ಮಳೆ ಆರ್ಭಟಿಸಿದ್ದು, ಜನಜೀವನ ಅಸ್ತವ್ಯಸ್ಥವಾಗಿದೆ. ವಾಡಿಕೆಗೆ ಹೆಚ್ಚು ಮಳೆಯಾಗಿರುವ ಹಿನ್ನೆಲೆಯಲ್ಲಿ, 2025-26ನೇ ಸಾಲಿನ ಅತಿವೃಷ್ಟಿಯಿಂದ ಮನೆಗಳು ಹಾಗೂ ಮನೆದಲ್ಲಿನ ಉಪಕರಣಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ರಾಜ್ಯ ಸರ್ಕಾರ ಪರಿಹಾರ ಬಿಡುಗಡೆ ಮಾಡಿದೆ.

ರಾಜ್ಯದ ವಿವಿಧ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿದ್ದು, 2025ರ ಏಪ್ರಿಲ್ 1ರಿಂದ ಮೇ 31ರೊಳಗೆ ಮನೆ ಹಾನಿಗೊಳಗಾದವರು ಪರಿಹಾರದ ಅರ್ಹರಾಗಿದ್ದಾರೆ. ಅವರು ಸಲ್ಲಿಸಿದ ಮಾಹಿತಿಯ ಪ್ರಕಾರ, ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಲಭ್ಯವಿರುವ ಅನುದಾನದ ಆಧಾರದ ಮೇಲೆ ಪರಿಹಾರವನ್ನು ಪಾವತಿಸಲಾಗುವುದು.

ಯಾರು ಎಷ್ಟು ಪರಿಹಾರ ಪಡೆಯಲಿದ್ದಾರೆ?

1. ಪೂರ್ಣ ಪ್ರಮಾಣದ ಮನೆ ಹಾನಿ

– ₹1.20 ಲಕ್ಷ ಪರಿಹಾರ

– ಜೊತೆಗೆ ದೇವರಾಜ್ ಅರಸು ವಸತಿ ಯೋಜನೆಯಡಿ ಮನೆ ಮಂಜೂರು

2. ಅರ್ಧಕ್ಕಿಂತ ಹೆಚ್ಚು ಆದರೆ 75%ಕ್ಕಿಂತ ಕಡಿಮೆ ಹಾನಿ

– ₹50,000 ಪರಿಹಾರ

– ಗೋಡೆ ಕುಸಿತ, ಮೇಲ್ಚಾವಣಿ ಹಾನಿಗೆ ಅನ್ವಯ

3. ಮಧ್ಯಮ ಪ್ರಮಾಣದ ಹಾನಿ (20% – 50%)

– ₹25,000 ಪರಿಹಾರ

– ಗೋಡೆ ಬಿರುಕುಗಳು ಅಥವಾ ಸಣ್ಣ ಪ್ರಮಾಣದ ಕುಸಿತ

4. ಅಲ್ಪ ಪ್ರಮಾಣದ ಹಾನಿ (15% – 20%)

– ₹6,500 ಪರಿಹಾರ

– ಮೇಲ್ಚಾವಣಿಯ ಹಂಚು/ಶೀಟು, ಬಾಗಿಲು, ಕಿಟಕಿ ಹಾನಿಗೆ ಅನ್ವಯ

ಪರಿಹಾರ ಪಾವತಿ ಕ್ರಮ ಹೇಗೆ?

ಹಾನಿಯ ಪ್ರಮಾಣವನ್ನು ಗ್ರಾಮ ಆಡಳಿತಾಧಿಕಾರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಮತ್ತು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಅಭಿಯಂತರರು ಜಂಟಿಯಾಗಿ ಮೌಲ್ಯಮಾಪನ ಮಾಡಿ ದೃಢಪಡಿಸಬೇಕು.

ಪೂರ್ಣ ಹಾನಿಗೆ ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ ₹1.20 ಲಕ್ಷ ನಗದು ಪಾವತಿಸಲಾಗುವುದು.

ಜೊತೆಗೆ, ದೇವರಾಜ್ ಅರಸು ವಸತಿ ಯೋಜನೆಯಡಿಯಲ್ಲಿ ಮನೆ ಹಂಚಿಕೆ ಪತ್ರವನ್ನು ಜಿಲ್ಲಾಧಿಕಾರಿಗಳ ಮೂಲಕ RGRHCL ತಂತ್ರಾಂಶದ ಮೂಲಕ ವಿತರಿಸಲಾಗುವುದು.

ಭಾಗಶಃ ಹಾನಿಗೆ ₹50,000 ಪರಿಹಾರ ಪಡೆಯುವ ಸಂತ್ರಸ್ತರು ತಮ್ಮ ಜಿಪಿಎಸ್ ಛಾಯಾಚಿತ್ರ, ಆರ್.ಆರ್. ಸಂಖ್ಯೆ ಮತ್ತು ಆಧಾರ್ ಸಂಖ್ಯೆಗಳನ್ನು RGRHCL ತಂತ್ರಾಂಶದಲ್ಲಿ ದಾಖಲಿಸಬೇಕು.

ಪರಿಹಾರಕ್ಕಾಗಿ ಅರ್ಜಿ ಹೇಗೆ ಸಲ್ಲಿಸಬೇಕು?

ಈ ವರ್ಷದ ಮುಂಗಾರು ಹಾಗೂ ಪೂರ್ವ ಮುಂಗಾರು ಮಳೆಗೆ ಮನೆಗೆ ಹಾನಿಯಾದ ಎಲ್ಲ ಫಲಾನುಭವಿಗಳು ತಮ್ಮ ಸಂಬಂಧಿತ ಗ್ರಾಮ ಲೆಕ್ಕಾಧಿಕಾರಿ ಕಚೇರಿ ಅಥವಾ ಗ್ರಾಮ ಪಂಚಾಯತ್‌ ಗೆ ಭೇಟಿ ನೀಡಿ, ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು.

ರಾಜ್ಯ ಸರ್ಕಾರದ ಈ ಕ್ರಮದಿಂದ ಮಳೆಹಾನಿಯಿಂದ ಸಂಕಷ್ಟಕ್ಕೊಳಗಾದ ಜನತೆಗೆ ಕೆಲವಷ್ಟು ನೆರವಾಗಲಿದೆ ಎನ್ನಲಾಗಿದೆ.

m

Related Posts