Featured, ಅಂಕಣ, ಸ್ಥಳೀಯ

ಸುಂದರ ಭಾರತ ಟ್ರಸ್ಟ್ ವತಿಯಿಂದ ವಿಧ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಣೆ ವಿತರಣೆ

ವಿಧ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪುಸ್ತಕಗಳು ಪೂರಕ:- ಶ್ರೀಮತಿ ಜಯಶ್ರೀ

ಸಂಪಾಜೆ:- ಇಂದು(ಜೂ.20) ಸುಂದರ ಭಾರತ ಟ್ರಸ್ಟ್ ಜೆ.ಪಿ ನಗರ ಬೆಂಗಳೂರು ಇವರ ವತಿಯಿಂದ ಕೊಡಮಾಡುವ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಣಾ ಕಾರ್ಯಕ್ರಮ ನಡೆಯಿತು.

ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ R.M.S.A ಪ್ರೌಢಶಾಲೆ ಸಂಪಾಜೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮುಖ್ಯ ಶಿಕ್ಷಕಿ ಜಯಶ್ರೀ, ಸುಂದರ ಭಾರತ ಟ್ರಸ್ಟ್ ನ ಎಲ್ಲಾ ಪದಾಧಿಕಾರಿಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಅಭಿನಂದಿಸಿ ಶುಭ ಹಾರೈಸಿದರು.

ಪುಸ್ತಕಗಳ ಮಹತ್ವ ಮತ್ತು ಟ್ರಸ್ಟ್ ನ ಕಾರ್ಯ ಚಟುವಟಿಕೆಗಳ ಕುರಿತಾಗಿ ಪ್ರೌಢಶಾಲಾ ವಿಭಾಗದ ದೈಹಿಕ ಶಿಕ್ಷಕಿ ಸುಜಯ ಮಾಹಿತಿ ನೀಡಿದರು. ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಎಸ್.ಡಿ.ಎಂ.ಸಿ ಯ ಪದಾಧಿಕಾರಿಗಳು, ಶಾಲೆಯ ಶಿಕ್ಷಕರು ಭಾಗವಹಿಸಿದ್ದರು.

ಪ್ರಾಥಮಿಕ ಶಾಲಾ ವಿಭಾಗದ ಮುಖ್ಯ ಗುರುಗಳಾದ ಚಂದ್ರಾವತಿ ವಂದಿಸಿ, ಸುಂದರ ಭಾರತ ಟ್ರಸ್ಟ್ ಅನ್ನು ಅಭಿನಂದಿಸಿದರು.

m

Related Posts