Featured, ಅಂಕಣ, ಸ್ಥಳೀಯ

ಪೆರುವಾಜೆ ಶ್ರೀ ಜಲದುರ್ಗಾ ದೇವಿ ಉದ್ಭವ ಜಮೀನು ಸರ್ವೇ

ಪೆರುವಾಜೆ ಶ್ರೀ ಜಲದುರ್ಗಾ ದೇವಿ ಉದ್ಭವ ದೇವರಮಾರು ಸಮಿತಿಯ ವತಿಯಿಂದ ದೇವರಮಾರು ಎಂಬಲ್ಲಿ ಶ್ರೀ ಜಲದುರ್ಗಾ ದೇವಿ ಉದ್ಭವ ಜಮೀನು ಅತಿಕ್ರಮಣದ ಬಗ್ಗೆ ಸುಳ್ಯ ತಹಶೀಲ್ದಾರ್ ಅವರಿಗೆ ಮನವಿ ಮಾಡಿದಂತೆ ಹಾಗೂ ಪೆರುವಾಜೆ ಗ್ರಾಮ ಪಂಚಾಯಿತಿ ಸರ್ಕಾರಿ ಸ್ಥಳ ಮೀಸಲಿಡಲು ನಿರ್ಣಯ ಕೈಗೊಂಡ ಪ್ರಕಾರ ಇಂದು ಸರ್ವೆ ಕಾರ್ಯ ನಡೆಯಿತು.ದೇಗುಲದ ಹೆಸರಲ್ಲಿ ಜಮೀನು ಮಿಸಲಿಡುವ ಪ್ರಕ್ರಿಯೆ ಆರಂಭ ಆಗಿದೆ.

ಕಂದಾಯ ನಿರೀಕ್ಷಕರಾದ ಅವಿನ್, ದೆಗುಲದ ಆಡಳಿತಾಧಿಕಾರಿ, ಸಮಿತಿ ಸಂಚಾಲಕ ನಿತಿನ್ ರಾಜ್ ಶೆಟ್ಟಿ, ಸಹ ಸಂಚಾಲಕ ಅಂಗಾರ ಬಜ, ದೇಗುಲದ ಮಾಜಿ ಅಧ್ಯಕ್ಷರಾದ ನಿರಂಜನ ಶೆಟ್ಟಿ, ದೀಪಕ್ ಶೆಟ್ಟಿ ಪೆರುವಾಜೆ, ಸರ್ವೆ ಅಧಿಕಾರಿ ಜಗದೀಶ್, ಪೆರುವಾಜೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ದೇವದಾಸ್ ಶೆಟ್ಟಿ, ರಾಘವ ಶೆಟ್ಟಿ, ಪ್ರಶಾಂತ್ ರೈ ಬಜ, ಅಮ್ರತ ರೈ ಬಜ ಪೋಲೀಸ್ ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ದರು

m

Related Posts