Featured, ಅಂಕಣ, ರಾಜ್ಯ, ಸ್ಥಳೀಯ

ನೈಸರ್ಗಿಕ ವಿಕೋಪದಿಂದ ಬಳಲಿದ ಕಮ್ಮಾಡಿ ಕುಟುಂಬಗಳಿಗೆ ಶಾಶ್ವತ ಮನೆ ಮತ್ತು ನೀರು ಸೌಲಭ್ಯ

ಕೇರಳ ಸರ್ಕಾರದ ಪರಿಶಿಷ್ಟ ಪಂಗಡ ಕಲ್ಯಾಣ ಸಚಿವ ಶ್ರೀ ಓ.ಆರ್. ಕೇಳು ಅವರಿಂದ ಕೀ ಹಸ್ತಾಂತರ; 

ಪರಪ್ಪ ಬ್ಲಾಕ್ ಅಧ್ಯಕ್ಷೆ ಶ್ರೀಮತಿ ಎಂ. ಲಕ್ಷ್ಮಿ ನೀರಿನ ಯೋಜನೆ ಉದ್ಘಾಟನೆ

ಕಲ್ಲಪ್ಪಳ್ಳಿ, ಪ್ರಾಕೃತಿಕ ವಿಕೋಪ ಭೀತಿಯಿಂದ ಬವಣೆ ಅನುಭವಿಸಿದ ಕಮ್ಮಾಡಿ ಹತ್ತು ಕುಟುಂಬಗಳಿಗೆ ಶಾಶ್ವತ ಸೂರು, ಇದರ ಕೀ ಹಸ್ತಾಂತರ ಕೇರಳ ರಾಜ್ಯ ಸರ್ಕಾರದ ಗೌರವಾನ್ವಿತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಲ್ಯಾಣ ಸಚಿವರಾದ ಶ್ರೀ ಓ ಆರ್ ಕೇಳು ನಿರ್ವಹಿಸಿದರು, ಹಾಗೂ ಈ ಕುಟುಂಬಗಳಿಗೆ ಕುಡಿಯುವ ನೀರಿನ ಪದ್ಧತಿಯ ಉದ್ಘಾಟನೆಯನ್ನು ಪರಪ್ಪ ಬ್ಲೋಕಿನ ಅಧ್ಯಕ್ಷರಾದ ಶ್ರೀಮತಿ ಎಂ ಲಕ್ಷ್ಮಿ ನಿರ್ವಹಿಸಿದರು.

ಪನತ್ತಡಿ ಗ್ರಾಮ ಪಂಚಾಯತ್ತಿನ ಆರನೇ ವಾರ್ಡ್‌ ನಲ್ಲಿರುವ ಕಮ್ಮಾಡಿ, ನೈಸರ್ಗಿಕ ವಿಕೋಪ ಪೀಡಿತ ಪ್ರದೇಶವಾಗಿದ್ದು, ಪ್ರತಿ ಮಳೆಗಾಲದಲ್ಲಿ ಇಲ್ಲಿನ ಜೀವನ ಕಷ್ಟಕರವಾಗುತ್ತಿದ್ದು . ಕಂದಾಯ ಇಲಾಖೆಯ ಹಾಗೂ ಗ್ರಾಮ ಪಂಚಾಯಿತ್, ಈ ಪ್ರದೇಶದ 10 ಪರಿಶಿಷ್ಟ ಪಂಗಡದ ಕುಟುಂಬಗಳನ್ನು ಕೆಲವು ವರ್ಷಗಳಿಂದ ಆಶ್ರಿತ ಕೇಂದ್ರಗಳಿಗೆ ಸ್ಥಳಾಂತರಿಸಲಾಗುತ್ತಿತ್ತು. ಇವರಿಗೆ ಕೇರಳ ರಾಜ್ಯ ಸರ್ಕಾರ 6 ಸೆಂಟ್ ಭೂಮಿಯನ್ನು ಒದಗಿಸಿ ಪುನರ್ವಸತಿ ನಿರ್ಮಿಸಲಾಯಿತು. ಇದಕ್ಕಾಗಿ ಪರಿಶಿಷ್ಟ ಪಂಗಡ ಅಭಿವೃದ್ಧಿ ಇಲಾಖೆಯ ವತಿಯಿಂದ ಮನೆ ನಿರ್ಮಾಣಕ್ಕಾಗಿ ತಲಾ 6 ಲಕ್ಷ ರೂ. ಗಳನ್ನು ಮಂಜೂರು ಮಾಡಲಾಯಿತು. ಕೇರಳ ರಾಜ್ಯ ಸರ್ಕಾರ ಹಾಗೂ ಪನತ್ತಡಿ ಗ್ರಾಮ ಪಂಚಾಯತು ಮತ್ತು ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಫಲವಾಗಿ ಸಂತ್ರಸ್ತ ಕುಟುಂಬಗಳ ಪುನರ್ವಸತಿ ಕಾಮಗಾರಿಯನ್ನು ಪೂರ್ತಿಗೊಳಿಲಾಯಿತು. ಪೂರ್ಣಗೊಂಡಿರುವ ಹತ್ತು ಮನೆಗಳ ಕೀ ಹಸ್ತಾಂತರ, ಹಾಗೂ ಪರಪ್ಪ ಬ್ಲೋಕಿನ ವಾರ್ಷಿಕ ಪದ್ದತಿಯಲ್ಲಿ 9,20,000 ರೂಪಾಯಿ ವೆಚ್ಚದಲ್ಲಿ ಹತ್ತು ಕುಟುಂಬಗಳಿಗೆ ಕುಡಿಯುವ ನೀರಿನ ಯೋಜನೆಯನ್ನು ಉದ್ಘಾಟನಾ ಸಮಾರಂಭವು 2025 ಜೂನ್ 21 ಶನಿವಾರ, ಕಲ್ಲಪ್ಪಳ್ಳಿ ಬಾಟೋಳಿಯಲ್ಲಿ ನಡೆಯಿತು..

 ಗೌರವಾನ್ವಿತ ಕಾಞಂಗಾಡ್ ಶಾಸಕ ಶ್ರೀ ಇ. ಚಂದ್ರಶೇಖರನ್ ಅವರ ಅಧ್ಯಕ್ಷತೆಯಲ್ಲಿ ಗೌರವಾನ್ವಿತ ಕೇರಳ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಿಂದುಳಿದ ವರ್ಗಗಳ ಅಭಿವೃದ್ಧಿ ಸಚಿವ ಶ್ರೀ ಓ. ಆರ್. ಕೇಳು ಫಲಾನುಭವಿಗಳಿಗೆ ಕೀ ಹಸ್ತಾನಂತರ ನೆರವೇರಿಸದರು, ಕುಡಿಯುವ ನೀರಿನ ಪದ್ಧತಿಯ ಉದ್ಘಾಟನೆಯನ್ನು ಪರಪ್ಪ ಬ್ಲೋಕಿನ ಅಧ್ಯಕ್ಷರಾದ ಶ್ರೀಮತಿ ಎಂ ಲಕ್ಷ್ಮಿ ನಿರ್ವಹಿಸಿದರು.

ಶ್ರೀ ಪಿ ಎಂ ಕುರಿಯಾಕೋಸ್ ಉಪಾಧ್ಯಕ್ಷರು, ಪನತ್ತಡಿ ಗ್ರಾಮ ಪಂಚಾಯತ್ ಶ್ರೀಮತಿ ಎಂ. ಪದ್ಮಕುಮಾರಿ ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷರು, ಪರಪ್ಪ ಬ್ಲಾಕ್ ಪಂಚಾಯತ್   ಶ್ರೀಮತಿ ಲತಾ ಅರವಿಂದ್ ಅಭಿವೃದ್ಧಿ ಕಾರ್ಯಗಳ ಸ್ಥಾಯಿ ಸಮಿತಿ ಅಧ್ಯಕ್ಷರು, ಪನತ್ತಡಿ ಗ್ರಾ.ಪಂ.ಶ್ರೀಮತಿ ಸುಪ್ರಿಯಾ ಶಿವದಾಸ್ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರು, ಪನತ್ತಡಿ ಗ್ರಾ.ಪಂ.ಶ್ರೀ ಅರುಣ್ ರಂಗತ್ತಮಲೆ .ಸದಸ್ಯರು, ಪರಪ್ಪ ಬ್ಲಾಕ್ ಪಂಚಾಯತು, ಹಾಗೂ ಹಾಗೂ ಪಂಚಾಯತಿನ ಜನಪ್ರತಿನಿಧಿಗಳು ವಿವಿಧ ರಾಜಕೀಯ ಪ್ರತಿನಿಧಿಗಳು ಶುಭ ಹಾರೈಸಿದರು.

ಕಾರ್ಯಕ್ರಮಕ್ಕೆ ಕೊನೆಯದಾಗಿ ಸ್ವಾಗತ ಸಮಿತಿಯ ಸಂಚಾಲಕರಾದ ಪನತ್ತಡಿ ಗ್ರಾಮ ಪಂಚಾಯಿತಿನ ಕ್ಷೇಮಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀ ರಾಧಾಕೃಷ್ಣ ಗೌಡ ವಂದಿಸಿದರು.

ಕಾರ್ಯಕ್ರಮದಲ್ಲಿ ಸುಸಜ್ಜಿತವಾದ ಗೃಹ ನಿರ್ಮಾಣ ಮಾಡಿಕೊಟ್ಟ ಶ್ರೀ ಗಂಗಾಧರ ಹಾಗೂ ಸಂಪೂರ್ಣವಾಗಿ ಸಹಕರಿಸಿದ ಶ್ರೀ ವಿ ಎಂ ಜೋನ್ ಮತ್ತು ಶ್ರೀಮತಿಲಕ್ಷ್ಮಿ ಬಾಯಿ ಇವರನ್ನು ಗೌರವಿಸಲಾಯಿತು

m

Related Posts