ಕ್ಷಮಿಸಿ, ಎಂದು ಪತ್ರ ಬರೆದು ಮಗುವನ್ನು ತ್ಯಜಿಸಿದ ಪೋಷಕರು..!?
ನವಿ ಮುಂಬೈ : ಪನ್ವೇಲ್ ಅನಾಥಾಶ್ರಮದ ಬಳಿ ಪ್ಲಾಸ್ಟಿಕ್ ಬುಟ್ಟಿಯಲ್ಲಿ ಮೂರು ದಿನದ ನವಜಾತ ಹೆಣ್ಣು ಮಗುವೊಂದು ಪತ್ತೆ ಯಾಗಿದೆ! ಸ್ಥಳೀಯ ನಿವಾಸಿಯೊಬ್ಬರು ಮಗು ಪತ್ತೆಯಾದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಬುಟ್ಟಿಯಲ್ಲಿ ಪೋಷಕರು ಬರೆದಿರುವ ಪತ್ರವೊಂದು ಕಂಡಿದ್ದು ಅದರಲ್ಲಿ ಕ್ಷಮಿಸಿ,ತಮ್ಮ ಆರ್ಥಿಕ ಸ್ಥಿತಿ ಚೆನ್ನಾಗಿಲ್ಲ, ಇದರಿಂದಾಗಿ ಮಗುವನ್ನು ಬೆಳೆಸಲು ಸಾಧ್ಯವಾಗುವುದಿಲ್ಲ ಎಂದು ಬರೆದು ಮಗುವನ್ನು ತ್ಯಜಿಸಿ ಪಾಲಾಯನ ಆಗಿದ್ದಾರೆ.ನವಜಾತ ಶಿಶುವನ್ನು ತ್ಯಜಿಸಿದ ಆರೋಪದ ಮೇಲೆ ಪನ್ವೇಲ್ ಪಟ್ಟಣ ಪೊಲೀಸರು ಭಾರತೀಯ ನ್ಯಾಯ ಸಂಹಿತದ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿ ಪೋಷಕರ ಹುಡುಕಾಟ ಆರಂಭಿಸಿದ್ದಾರೆ




m

