ಪ್ರಾಚೀನ ಕಾಲದಿಂದಲೇ ಶಿಕ್ಷಣಕ್ಕೆ ಎಲ್ಲಾ ಸಮುದಾಯದವರು ಎಲ್ಲಾ ರೀತಿಯಲ್ಲು ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ.
ಬದಲಾವಣೆ ಕಾಲದ ನಿಯಮ ಎಂಬಂತೆ ಶಿಕ್ಷಣ ಕ್ಷೇತ್ರದಲ್ಲಿ ಇಂದು ಭಾರಿ ಬದಲಾವಣೆಯಾ hಗಿದೆ.ಪ್ರಸ್ತುತ ನಾವು ತಂತ್ರಜ್ಞಾನ ಯುಗದಲ್ಲಿದ್ದೇವೆ, ಇದಕ್ಕೆ ತಕ್ಕಂತೆ ನಮ್ಮ ಶಿಕ್ಷಣ ವ್ಯವಸ್ಥೆಯು ತಂತ್ರಜ್ಞಾನಮಯವಾಗುತ್ತಿದೆ.
ಪ್ರಸ್ತುತ ರಾಜ್ಯದಲ್ಲಿ ನೋಡಿದರೆ ಹಲವಾರು ಶಾಲಾ ಕಾಲೇಜುಗಳು, ವಿಶ್ವ ವಿದ್ಯಾನಿಲಯವೂ ಇವೆ.ಅಲ್ಲಿ ಹಲವಾರು ವಿದ್ಯಾರ್ಥಿಗಳು ವಿದ್ಯಾರ್ಜನೆ ಗೆಯ್ಯು ತ್ತಿದ್ದಾರೆ, ಕೆಲವು ವರ್ಷಗಳ ಕಲಿಕೆ ನಂತರ ವಿದ್ಯಾರ್ಥಿಗಳು ಪದವಿ(degree)ಯನ್ನು ಪಡೆದು ವಿದ್ಯಾರ್ಥಿಗಳು ತಮ್ಮ ತಮ್ಮ ವೃತ್ತಿಗೆ ಎಂದು ಇಳಿಯುತ್ತಿದ್ದಾರೆ.ಆದರೆ ಪ್ರತಿದಿನ ನಿರುದ್ಯೋಗದ ಮಟ್ಟ ಕೂಡ ಏರುತ್ತದೆ.
ರಾಜ್ಯದಲ್ಲಿ ಹಲವಾರು ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ,ಸಣ್ಣ ಬೃಹತ್ ಕೈಗಾರಿಕಾ ಸಂಸ್ಥೆಗಳು ಎಲ್ಲವೂ ಇವೆ.ಅಲ್ಲಿ ಬೇಕಾದಷ್ಟು ಉದ್ಯೋಗ ಅವಕಾಶಗಳು ಇದೆ. ಆದರೆ ಅದಕ್ಕೆ ನೇಮಕಾತಿ ಮಾತ್ರ ಯಥಾಕ್ರಮದಲ್ಲಿ ನಡೆಯುತ್ತಿಲ್ಲ. ನಡೆದರೂ ಸಹ ಸಮರ್ಪಕವಾಗಿ ನಡೆಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.
ಇತ್ತೀಚಿಗೆ ಬಂದ ಒಂದು ವರದಿಯ ಪ್ರಕಾರ ಪ್ರತಿ ಶೇ 100 ರಲ್ಲಿ ಶೇ60% ರಷ್ಟು ಜನರು ಮಾತ್ರ ಪದವಿ ಪಡೆದಿದ್ದಾರೆ. ಆದರೂ ಸಹ ಅವರು ನಿರುದ್ಯೋಗಿಗಳಾಗಿದ್ದಾರೆ ಎಂಬುದು ಆಘಾತಕಾರಿ ಬೆಳವಣಿಯಾಗಿದೆ. ಯಾಕೆಂದರೆ ನಾವೆಲ್ಲ ಪದವಿಯನ್ನು ಕಲಿಯುತ್ತಿದ್ದು ಈಗಲೇ ಈ ರೀತಿಯ ಬೆಳವಣಿಗೆ ಕಂಡರೆ ನಮ್ಮ ಮುಂದಿನ ಭವಿಷ್ಯ ಏನಾಗುತ್ತದೆ ಎಂಬುದು ಪ್ರಶ್ನತೀತವಾಗಿಯೇ ಉಳಿಯುತ್ತದೆ.
ಈ ವೇಳೆ ನಾವು ಎಷ್ಟೇ ದೊಡ್ಡ ದೊಡ್ಡ ದೇಶ-ವಿದೇಶಗಳ ವಿಶ್ವವಿದ್ಯಾನಿಲಯಗಳಿಂದ ಪದವಿಯನ್ನು ಪಡೆದರೂ,ಲಕ್ಷ ಗಟ್ಟಲೆ ಖರ್ಚು ಮಾಡಿದರೂ ಸಹ ಯಾವುದೇ ಫಲವಿಲ್ಲದ ಮರವಂತಾಗುತ್ತದೆ.ಈ ವೇಳೆ ನಾವು ಎಷ್ಟೇ ಉತ್ತಮ ದರ್ಜೆಯ ಅಂಕಗಳಿಸಿದರು ಕೆಲವೊಮ್ಮೆ ಆ ಅಂಕಗಳು ನಮಗೆ ಕೈಕೊಡುತ್ತದೆ.
ಆಧುನಿಕ ಕಾಲದಲ್ಲಿ ಅಂಕಗಳಿಗಿಂತ, ಪದವಿಗಿಂತ ಕೌಶಲ್ಯ( skill)ಮುಖ್ಯವಾಗಿದೆ.
ಇತ್ತೀಚಿಗೆ ಒಂದು ಕಂಪನಿಯಲ್ಲಿ ಉದ್ಯೋಗಕ್ಕೆ ಅರ್ಜಿ ಹಾಕಿದವರಲ್ಲಿ ಎಲ್ಲರು ಪದವಿ ಪಡೆದವರು. ಅದರಲ್ಲೂ ಉತ್ತಮ ದರ್ಜೆಯಲ್ಲಿ ಉನ್ನತಿ ಉತ್ತೀರ್ಣರಾದವರು.ಆದರೆ ಕೊನೆಗೆ ಯಾರನ್ನು ಆಯ್ಕೆ ಮಾಡಬೇಕು ಎಂಬುದರಲ್ಲಿ ಗೊಂದಲ ಉಂಟಾದಾಗ ಆಡಳಿತ ಮಂಡಳಿಯವರು ಸ್ಪರ್ಧಿಗಳ ಕೌಶಲ್ಯದ ಆಧಾರದ ಮೇಲೆ ಆಯ್ಕೆ ಮಾಡಲು ನಿರ್ಧರಿಸಿದರು.
ಈ ವೇಳೆ ಅರ್ಜಿ ಹಾಕಿದ ಸ್ಪರ್ಧಿಗಳಲ್ಲಿ ಅರ್ಧಕ್ಕಿಂತ ಹೆಚ್ಚು ಮುಂದೆ ನಿರಾಶೆಯಿಂದ ಹಿಂದೆ ಹೋದರು.ಕಾರಣ ಅವರಿಗೆ ಪದವಿ ಅಲ್ಲದೆ ಬೇರೆ ಯಾವುದೇ ತಿಳುವಳಿಕೆ ,ಕೌಶಲ್ಯದ ಕುರಿತು ಜ್ಞಾನವಿರಲಿಲ್ಲ.
ಈಗ ನಾವು ನಮಗಿರುವ ಕೌಶಲ್ಯದ ಕುರಿತು ಚಿಂತಿಸಬೇಕಾದ ಗಳಿಗೆ ಬಂದಿದೆ. ನಮ್ಮಲ್ಲಿ ಅನೇಕ ಕೌಶಲ್ಯಗಳಿವೆ.ಆದರೆ ಬೇರೆಯವರ ಮುಂದೆ ಅದನ್ನು ಪ್ರದರ್ಶಿಸುವ ರೀತಿಯ ಸಮರ್ಥ ಸಾಮರ್ಥ್ಯವನ್ನು ಹೊಂದಿಲ್ಲ ಎಂಬುದು ಒಂದು ರೀತಿಯ ಅಪಹಾಸ್ಯ ಸಂಗತಿ ಆಗಿದೆ. ಉದಾಹರಣೆಗೆ ಒಂದು ತರಗತಿಯಲ್ಲಿ ನಾಲ್ಕು ಗೋಡೆ ಮುಂದೆ ಎದ್ದು ನಿಂತು ಮಾತನಾಡುವ ವಿದ್ಯಾರ್ಥಿ ಇರಬಹುದು ಆದರೆ ಆತನಿಗೆ ಒಂದು ಕಾರ್ಯಕ್ರಮದಲ್ಲಿಯೋ ಸಭೆಯಲ್ಲಿಯೋ ಎದ್ದು ನಿಂತು ಮಾತನಾಡುವ ಧೈರ್ಯ ಇರುವುದಿಲ್ಲ.
ಈ ರೀತಿಯ ಮಾನಸಿಕ ತೊಗಲಾಟದಿಂದ ಹೊರ ಬರಬೇಕಾದರೆ ನಾವು ನಮಗಿರುವ ಕೌಶಲ್ಯವನ್ನು ಅಭಿವೃದ್ಧಿಪಡಿಸುತ್ತ ಮುಖ ಮಾಡಬೇಕಾಗಿದೆ.
ಈ ಕಾಲದಲ್ಲಿ ಹಲವಾರು ರೀತಿಯ ಸರ್ಕಾರಿ ಮತ್ತು ಸರ್ಕಾರಿಯೇತರ ಉಚಿತ ಮತ್ತು ಅಲ್ಲದ ಹಲವಾರು ಕೌಶಲ್ಯ ಅಭಿವೃದ್ಧಿ ಕೋರ್ಸ್ ,ತರಬೇತಿ ಕಾರ್ಯಕ್ರಮಗಳು, ತರಗತಿಗಳು ಮತ್ತು ಕೊನೆಗೆ ಪರೀಕ್ಷೆ ನಡೆಸಿ ದೃಢೀಕರಣ ಪತ್ರ ನೀಡುವಂತಹ ವ್ಯವಸ್ಥೆ ಇವೆ ಅದೇ ರೀತಿ ಹಲವಾರು ರೀತಿಯ ಆನ್ಲೈನ್ ಕೋರ್ಸ್ ಗಳು ಕೂಡ ಇವತ್ತು ಲಭ್ಯವಿದೆ. ಆದ್ದರಿಂದ ಅದೆಲ್ಲವನ್ನು ಉಪಯೋಗಿಸಿ ನಾವು ನಮ್ಮ ಕೌಶಲ್ಯವನ್ನು ಅಭಿವೃದ್ಧಿಪಡಿಸಿದರೆ ಮಾತ್ರ ನಾವು ಪಡೆದ ಪದವಿಗೆ ಬೆಲೆ ಇರುವುದು. ಇದೆಲ್ಲವನ್ನೂ ಮನಗಂಡು ನಮ್ಮ ಕಲಿಕೆಯೊಂದಿಗೆ ಪದವಿಯೊಂದಿಗೆ ನಮ್ಮ ಕೌಶಲ್ಯವನ್ನು ಅಭಿವೃದ್ಧಿಪಡಿಸಿ, ಮುಂದಿನ ಜೀವನವನ್ನು ಸದೃಢಪಡಿಸುವ ಯೋಜನೆಯನ್ನು ನಾವು ಮಾಡಬೇಕಾಗಿದೆ.
ಆಶಿಕ್ ಕೊಡಗು ದ್ವಿತೀಯ ಪದವಿ ವಿದ್ಯಾರ್ಥಿ




m
