Featured, ಅಂಕಣ, ಸ್ಥಳೀಯ

ಸುಳ್ಯ ಕ್ಷೇತ್ರದ ಸಂಪಾಜೆ ಗ್ರಾಮದ ರಸ್ತೆಗಳ ಅಭಿವೃದ್ಧಿ ಗೆ ರೂ 1 ಕೋಟಿ ಅನುದಾನ ತರಿಸಿದ ಟಿ. ಎಂ. ಶಹಿದ್ ತೆಕ್ಕಿಲ್ ರವರಿಗೆ ಸೂಡ ಅಧ್ಯಕ್ಷ ಕೆ. ಎಂ. ಮುಸ್ತಫ ಅಭಿನಂದನೆ

ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ವಿವಿಧ ರಸ್ತೆಗಳ ಅಭಿವೃದ್ಧಿ ಗೆ ಮುಖ್ಯಮಂತ್ರಿಯವರ ವಿಶೇಷ ಅನುದಾನದಲ್ಲಿ ರೂ 1 ಕೋಟಿ ಅನುದಾನ ತರುವಲ್ಲಿ ಯಶಸ್ವಿಯಾದ ಕೆಪಿಸಿಸಿ ಪ್ರದಾನ ಕಾರ್ಯದರ್ಶಿ ಟಿ. ಎಂ. ಶಹೀದ್ ರವರನ್ನು ಸುಳ್ಯ ನಗರ ಯೋಜನಾ ಪ್ರಾಧಿಕಾರ (ಸೂಡ ) ಅಧ್ಯಕ್ಷ ಕೆ. ಎಂ. ಮುಸ್ತಫ ಅಭಿನಂದಿಸಿರುತ್ತಾರೆ

ಇದರಿಂದ ಕ್ಷೇತ್ರದ ಅಭಿವೃದ್ಧಿ ಯಲ್ಲಿ ತಮಗೆ ಇರುವ ಕಾಳಜಿ ಮತ್ತು ಬದ್ಧತೆಯನ್ನು ಸಾಬೀತು ಪಡಿಸಿರುತ್ತಾರೆ ಈ ಹಿಂದೆ ಕೂಡ ಬಹು ಕಾಲದ ಬೇಡಿಕೆಯಾದ ಪೇರಡ್ಕ ಸೇತುವೆ, ವಿವಿಧ ಕಾಮಗಾರಿಗಳಿಗೆ ಎಂಎಲ್ ಸಿ, ರಾಜ್ಯಸಭಾ ಎಂಪಿ ಗಳ ಫಂಡ್ ನ ಅನುದಾನ ಮತ್ತು ಪ್ರವಾಸೋದ್ಯಮ ಇಲಾಖೆಯಿಂದ ಯಾತ್ರಿ ನಿವಾಸ್, ಶೌಚಾಲಯ ನಿರ್ಮಾಣಕ್ಕೆ ಅನುದಾನ ತರಿಸಿ ಅಭಿವೃದ್ಧಿ ಯಲ್ಲಿ ಪ್ರಮುಖ ಪಾತ್ರ ವಹಿಸಿರುವುದು ಗಮನಾರ್ಹ ಎಂದು ಕೆ. ಎಂ. ಮುಸ್ತಫ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.

m

Related Posts