ಪಂಚಾಯತ್ ಗೇಟ್ ಗೆ ಬೀಗ” ಜಡೆಯುವ ಎಚ್ಚರಿಕೆ ಬೆನ್ನಲ್ಲೇ ಎಚ್ಚೆತ್ತ ಸ್ಥಳೀಯಾಡಳಿತ : ಹೊಂಡ ಗುಂಡಿಗಳಿಗೆ ತಾತ್ಕಾಲಿಕ ಜಲ್ಲಿ ತುಂಬುವ ಕಾರ್ಯ ಆರಂಭ.!!

ಸುಳ್ಯ : ಅಮೃತ್ 2 ಯೋಜನೆಯಲ್ಲಿ ನಗರದ ರಸ್ತೆಯನ್ನು ಅಗೆದು ಸಂಚಾರಕ್ಕೆ ಅಡಚಣೆ ಉಂಟಾಗಿ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಜು.15ರೊಳಗೆ ರಸ್ತೆಯ ಹೊಂಡಗುಂಡಿಗಳನ್ನು ಮುಚ್ಚದಿದ್ದರೆ ಜು.16ರಂದೇ ಪಂಚಾಯತ್ ಗೇಟಿಗೆ ಬೀಗ ಜಡಿಯುವುದಾಗಿ ವಿಪಕ್ಷ ಸದಸ್ಯ ಕೆ.ಎಸ್. ಉಮ್ಮರ್ ಜುಲೈ _02 ರಂದು ನಡೆದ ನಗರ ಪಂಚಾಯತ್ ಸಭೆಯಲ್ಲಿ ಗುಡುಗಿದರು

ಸುಮಾರು 2 ತಾಸುಗಳ ಕಾಲ ವಿಷಯ ಚರ್ಚೆ ಆಗಿತ್ತು ರಸ್ತೆಯ ಹೊಂಡಗುಂಡಿಗಳನ್ನು ಮುಚ್ಚಿದೆ ಸಾರ್ವಜನಿಕರು ಬಾರಿ ತೊಂದರೆಗಳನ್ನು ಎದುರಿಸುತ್ತಿದ್ದರು. ಇದೀಗ ಕೆ ಎಸ್ ಉಮ್ಮರ್,ಹಾಗೂ ವಿಪಕ್ಷ ಸದಸ್ಯರ ಎಚ್ಚರಿಕೆ ಗೆ ಸ್ಥಳೀಯಾಡಳಿತ ಸ್ಪಂದಿಸಿ ಇದೀಗ ನಗರದ ವಿವಿಧ ಭಾಗಗಳಲ್ಲಿ ರಸ್ತೆಯಲ್ಲಿವ ಹೊಂಡ ಗುಂಡಿಗಳಿಗೆ ತಾತ್ಕಾಲಿಕ ಜಲ್ಲಿ ತುಂಬುವ ಕಾರ್ಯವನ್ನು ಸಂಬಂಧಪಟ್ಟ ಗುತ್ತಿಗೆದಾರರು ಆರಂಭಿಸಿದ್ದಾರೆ. ಜಯನಗರ, ಬೀರಮಂಗಲ, ಕಲ್ಲುಮುಟ್ಟು ಮುಂತಾದ ಕಡೆಗಳಲ್ಲಿ ಹೊಂಡಗಳಿಗೆ ಜಲ್ಲಿ ತುಂಬುವ ಕೆಲಸ ನಡೆಯುತ್ತಿರುವುದು ಕಂಡುಬಂದಿದೆ,






m

