ಗುಡ್ಡೆಹೊಸೂರು ಬಳಿ ಲಾರಿ ಹರಿದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ.
ಮೃತ ವ್ಯಕ್ತಿಯನ್ನು ನಾಪೊಕ್ಲು ಕೊಟ್ಟಮುಡಿ ಗ್ರಾಮದ ಅಬ್ದುಲ್ ಸಲಾಂ ಎಂದು ಗುರುತಿಸಲಾಗಿದೆ.
ಗುರುವಾರ ಬೆಳಗಿನ ಜಾವ ಮೈಸೂರಿನತ್ತ ತೆರಳುತ್ತಿದ್ದ ಲಾರಿ, ಹೆದ್ದಾರಿಯಲ್ಲಿ ಮಲಗಿದ್ದ ಅಬ್ದುಲ್ ಅವರ ತಲೆ ಮೇಲೆ ಹರಿದಿದೆ ಎನ್ನಲಾಗಿದೆ. ಅಬ್ದುಲ್ ಹೆದ್ದಾರಿ ಅಂಚಿನಲ್ಲಿ ತಲೆಹಾಕಿ ಮಲಗಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಘಟನೆ ಸಂಬಂಧ ಕುಶಾಲನಗರ ಸಂಚಾರ ಪೊಲೀಸ್ ಠಾಣೆ ತನಿಖೆ ಆರಂಭಿಸಿದೆ




m
