Featured, ಅಂಕಣ, ಸ್ಥಳೀಯ

ಮಾದಕ ವ್ಯಸನದ ವಿರುದ್ಧ ಜಾಗೃತಿ ಅಭಿಯಾನ – ಪೈಚಾರ್‌ನಲ್ಲಿ ಬೃಹತ್ ಕಾರ್ಯಕ್ರಮ

ಪೈಚಾರ್:ಅಲ್-ಅಮೀನ್ ಯೂತ್ ಸೆಂಟರ್ ಹಾಗೂ S.B.S ಖುವ್ವತ್ತುಲ್ ಇಸ್ಲಾಂ ಮದರಸ, ಪೈಚಾರ್ ಇವೆರಡೂ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಮಾದಕ ವ್ಯಸನದ ವಿರುದ್ಧ ಜಾಗೃತಿ ಅಭಿಯಾನ ಕಾರ್ಯಕ್ರಮ ಜುಲೈ 27ರಂದು ಪೈಚಾರ್ ಮದರಸದ ಆವರಣದಲ್ಲಿ ವಿಜೃಂಭಣೆಯಿಂದ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಸುಳ್ಯ ಠಾಣೆಯ ಸಹಾಯ ಉಪನಿರೀಕ್ಷಕರಾದ ಶ್ರೀ ಸೋಮಯ್ಯ ನಾಯ್ಕ್ ನೆರವೇರಿಸಿದರು.

ಕಾರ್ಯಕ್ರಮವನ್ನು ಬಹು. ಶಮೀರ್ ಅಹ್ಮದ್ ನಹೀಮಿ ಖತೀಬ್, ಬದ್ರಿಯ ಜುಮಾ ಮಸೀದಿ, ಪೈಚಾರ್ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಲಾಯಿತು.

ಅಧ್ಯಕ್ಷತೆಯನ್ನು ಅಲ್-ಅಮೀನ್ ಯೂತ್ ಸೆಂಟರ್ ಪೈಚಾರ್ ಅಧ್ಯಕ್ಷರಾದ ಜ. ಅಬ್ದುಲ್ ಸತ್ತಾರ್ ಪಿ.ಎ. ವಹಿಸಿದರು.

ಮುಖ್ಯ ಭಾಷಣ ನೀಡಿದ ಜುಮ್ಮಾ ಮಸೀದಿ, ಜಾಲ್ಸೂರಿನ ಖತೀಬರಾದ ಬಹು. ಮುನೀರ್ ಸಹದಿ ಅಲ್ ಅರ್ಷದಿ ಅವರು ಮಾದಕ ವ್ಯಸನದ ಹಾನಿಕಾರಕ ಪರಿಣಾಮಗಳ ಬಗ್ಗೆ ಆಳವಾದ ಮಾಹಿತಿ ನೀಡಿ ಯುವಕರನ್ನು ಈ ದುಶೀಲದಿಂದ ದೂರವಿರಲು ಪ್ರೇರಿತರಿಸಿದರು.

ಕಾರ್ಯಕ್ರಮದಲ್ಲೊಂದು ಮುಖ್ಯ ಆಕರ್ಷಣೆ ಎಂದರೆ ಲೇಖಕ ಇಕ್ಬಾಲ್ ಬಾಳಿಲ ರಚಿಸಿರುವ “ಮಾದಕ ವ್ಯಸನದ ವಿರುದ್ಧ ಜಾಗೃತಿ ಅಭಿಯಾನ” ಎಂಬ ಶೀರ್ಷಿಕೆಯ ಪುಸ್ತಕ ಬಿಡುಗಡೆ ಆಗಿದ್ದು, ಕಾರ್ಯಕ್ರಮಕ್ಕೆ ಬೇರೆಯೇ ಭಾರೀ ಹಿನ್ನೆಲೆಯನ್ನು ನೀಡಿತು.

ಶ್ರೀ. ಸತೀಶ್, ಪ್ರಾಂಶುಪಾಲರು, ಸರಕಾರಿ ಪ್ರಥಮ ದರ್ಜೆ ಕಾಲೇಜು, ಸುಳ್ಯ, ಬಹು. ಪೈಝಲ್ ಸಖಾಫಿ, ಸದರ್ ಮುಅಲ್ಲಿಮ್, ಖುವ್ವತ್ತುಲ್ ಇಸ್ಲಾಂ ಮದರಸ, ಪೈಚಾರ್, ಜ. ಮುಜೀಬ್ ಪೈಚಾರ್, ಸದಸ್ಯರು, ಗ್ರಾಮ ಪಂಚಾಯತ್ ಜಾಲ್ಲೂರು, ಹಾಜಿ ಇಬ್ರಾಹಿಂ ಪಿ, ಅಧ್ಯಕ್ಷರು, ಬದ್ರಿಯ ಜುಮಾ ಮಸೀದಿ, ಪೈಚಾರ್, ಜ. ಇಬ್ರಾಹಿಂ ಎಸ್ ಎ, ಮದರಸ ಉಸ್ತುವಾರಿ, QIM ಪೈಚಾರ್, ಮಾ. ಮಹಮ್ಮದ್ ನಿಫಾಲ್, ಅಧ್ಯಕ್ಷರು, SBS ಖುವ್ವತ್ತುಲ್ ಇಸ್ಲಾಂ ಮದರಸ, ಪೈಚಾರ್ ಹಾಗೂ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಯುವ ಪೀಳಿಗೆಯ ಭವಿಷ್ಯ ರಕ್ಷಣೆಗೆ ಇಂತಹ ಜಾಗೃತಿ ಕಾರ್ಯಕ್ರಮಗಳು ಬಹುಮಹತ್ವದ್ದಾಗಿದ್ದು, ಹಮ್ಮಿಕೊಳ್ಳಲಾಗುತ್ತಿರುವುದು ಶ್ಲಾಘನೀಯ. ಕಾರ್ಯಕ್ರಮವು ಶಿಸ್ತಿನಂತೆ ನಡೆಯಿತು ಮತ್ತು ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿತು.

m

Related Posts