Featured, ಅಂಕಣ, ಇತರೆ, ಸ್ಥಳೀಯ

ಸುಳ್ಯ: ಎರಡು ದಿನಗಳಿಂದ ಕತ್ತಲಲ್ಲಿ ಕಾಲ ಕಳೆಯುತ್ತಿರುವ ಸುಳ್ಯದ ಜನತೇ.! ಸಾರ್ವಜನಿಕರು ಆಕ್ರೋಶಿತ, ತಾಲೂಕು ಆಡಳಿತ ಮೌನವ್ರತದಲ್ಲಿ

ಸಮಸ್ಯೆಗೆ ಸ್ಪಂದಿಸದ ಶಾಸಕರು, ಜನ ಪ್ರತಿನಿಧಿಗಳು..?! ಮಾಹಿತಿ ನೀಡದ ಅಧಿಕಾರಿಗಳು..?!

ಸುಳ್ಯ ತಾಲೂಕಿನ ಹಲವೆಡೆ ಕಳೆದ ಎರಡು ದಿನಗಳಿಂದ ನಿರಂತರ ವಿದ್ಯುತ್ ವ್ಯತ್ಯಯ ಉಂಟಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಮಳೆಯ ಅಬ್ಬರದಿಂದಾಗಿ ಮರಗಳು ಕಂಬಗಳ ಮೇಲೆ ಬಿದ್ದು ವಿದ್ಯುತ್ ಲೈನ್ ಗಳಿಗೆ ಹಾನಿಯಾದರೂ, ಯಾವುದೇ ಪೂರ್ಣ ಮಾಹಿತಿ ನೀಡದೆ ಸುಳ್ಯ ಮೆಸ್ಕಾಂ ಅಧಿಕಾರಿಗಳು ಮೌನವಹಿಸಿದ್ದಾರೆ.

ಇನ್ನು ಕ್ಷೇತ್ರದ ಶಾಸಕರು, ಜನಪ್ರತಿನಿಧಿಗಳು ಹಾಗೂ ಸರ್ಕಾರದಿಂದ ನಾಮನಿರ್ದೇಶಿತನಾಗಿ ಸ್ಥಾನ ಪಡೆದ ಪ್ರಮುಖರು ಕೂಡ ಈ ಸಮಸ್ಯೆಗೆ ಸ್ಪಂದಿಸದಿರುವುದು ಸಾರ್ವಜನಿಕರ ಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. “ಸುಳ್ಯ ತಬ್ಬಲಿ ನಿನಾದೇ ಮಗನೆ?” ಎಂಬ Citizens’ ಕೂಗು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗಿದ್ದು, ಜನತೆ ಅಸಹನೆ ವ್ಯಕ್ತಪಡಿಸುತ್ತಿದ್ದಾರೆ.
ವಿದ್ಯುತ್ ವ್ಯತ್ಯಯದಿಂದ ವಿದ್ಯಾರ್ಥಿಗಳ ಓದು, ಆಸ್ಪತ್ರೆಗಳ ತುರ್ತು ಸೇವೆ, ವ್ಯಾಪಾರ ವಹಿವಾಟು, ಮನೆಮನೆಯ ದೈನಂದಿನ ಚಟುವಟಿಕೆಗಳಲ್ಲಿ ಅಸಾಧಾರಣ ಅಡಚಣೆ ಉಂಟಾಗಿದ್ದು, ಜನರ ದೈರ್ಯಕ್ಕೆ ಮಿತಿ ಬಂದಿದೆ. ಕೂಡಲೇ ಸೂಕ್ತ ದುರಸ್ತಿ ಕಾರ್ಯ ಹಾಗೂ ಸ್ಪಷ್ಟ ಮಾಹಿತಿ ನೀಡುವಂತೆ ಜನರು ಒತ್ತಾಯಿಸುತ್ತಿದ್ದಾರೆ.
ಸರ್ಕಾರಿ ಯಂತ್ರಾಂಗದ ನಿರ್ಲಕ್ಷ್ಯ ಹಾಗೂ ಜನಪ್ರತಿನಿಧಿಗಳ ಮೌನ ಪ್ರಶ್ನೆಯಾಗುತ್ತಿದ್ದು, ಸುಳ್ಯ ಮತ್ತೆ ಬೆಳಕು ಕಾಣಬೇಕಾದ ಅವಶ್ಯಕತೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ.

m

Related Posts