Featured, ಅಂಕಣ, ಇತರೆ, ಸ್ಥಳೀಯ

ಆಲಂತಡ್ಕ – ಪೆಲತ್ತಡ್ಕ ಮುರ್ಕೆತ್ತಿ ಮೂಲಕ ಪೆರುವಾಜೆ ಸಂಪರ್ಕ ರಸ್ತೆ ದುರಾವಸ್ಥೆ

ಶೀಘ್ರ ಗ್ರಾಮಸ್ಥರ ಸಭೆ:– ಪೆರುವಾಜೆ ಪಂಚಾಯಿತಿವರೆಗೆ ಪಾದಯಾತ್ರೆ

ಪೆರುವಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುರ್ಕೆತ್ತಿ ವಾರ್ಡ್ ನ ಆಲಂತಡ್ಕ, ನಾಗನಮಜಲು ಈ ಭಾಗದ ರಸ್ತೆ ತೀವ್ರ ಹದಗೆಟ್ಟು ಹೋಗಿದ್ದು ಪೆರುವಾಜೆ ಪಂಚಾಯಿತಿ ಸಂಪರ್ಕ ರಸ್ತೆ ದುರ್ಗಾ ನಗರ ದಿಂದ ಪೆರುವಾಜೆ ವರೆಗೆ ಹೋಗಲು ಅಸಾಧ್ಯ ವಾಗಿದೆ.ಇದು ಗ್ರಾಮ ಪಂಚಾಯಿತಿ ವತಿಯಿಂದ ಇದರ ದುರಸ್ತಿ ಕಷ್ಟ ಕರ,ಇದರ ಬಗ್ಗೆ ಶಾಸಕರ, ಲೋಕಸಭಾ ಸದಸ್ಯರ ಗಮನಕ್ಕೆ ತರಲು, ತೀವ್ರ ಹದಗೆಟ್ಟ ಸುಮಾರು 30 ವರುಷಗಳಿಂದ ಸರಕಾರದ ಅನುದಾನ ಕಾಣದ ಆಲಂತಡ್ಕ ದಿಂದ ಪೆಲತ್ತಡ್ಕ ಮೂಲಕ ಪೆರುವಾಜೆ ಪಂಚಾಯತ್ ವರೆಗೆ ಪಾದಯಾತ್ರೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಪಂಚಾಯಿತಿ ಸದಸ್ಯ ಸಚಿನ್ ರಾಜ್ ಶೆಟ್ಟಿ ಹಾಗೂ ಉಪಾಧ್ಯಕ್ಷೆ ಶ್ರೀಮತಿ ಶಹಿನಾಜ್ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಶೀಘ್ರ ಗ್ರಾಮಸ್ಥರ ಸಭೆಯನ್ನು ನಡೆಸಿ ದಿನಾಂಕ ನಿಗದಿ ಗೊಳಿಸಲಾಗುವುದೆಂದು ತಿಳಿಸಿದ್ದಾರೆ.

m

Related Posts