Featured, ಸ್ಥಳೀಯ

ಪರಿವಾರಕಾನದಲ್ಲಿ ವಿನೂತನ ವಸ್ತ್ರ ಮಳಿಗೆ ಬ್ರ್ಯಾಂಡ್ ಫಿ ಆನ್ಲೈನ್ ಸ್ಟೋರ್ ಶುಭಾರಂಭ

ಮಕ್ಕಳ,ಮಹಿಳೆಯರ ಹಾಗೂ ಪುರುಷರ ಕ್ಲಾಸಿಕ್, ಕ್ಯಾಶುಯಲ್ ಹಾಗೂ ಮಾಡರ್ನ್ ವಸ್ತ್ರಗಳ ಅಭೂತಪೂರ್ವ ಸಂಗ್ರಹ

ಸುಳ್ಯ ಜುಲೈ 31:- ನಗರದ ಹೊರಭಾಗದಲ್ಲಿರುವ ಪರಿವಾರಕಾನ ಮಾಂಬ್ಳಿಯಲ್ಲಿ ಯುವ ಉದ್ಯಮಿಗಳಾದ ಅನಸ್ ಮಾಂಬ್ಳಿ,ಅಶ್ಫಾಕ್ ಪಿ.ಆರ್ ಹಾಗೂ ಫಾರಿಸ್ ಮಾಂಬ್ಳಿ ಮಾಲಕತ್ವದ ಮಕ್ಕಳು ,ಮಹಿಳೆಯರ ಹಾಗೂ ಪುರುಷರ ಆನ್‌ಲೈನ್ ಕೇಂದ್ರೀಕೃತ ವಸ್ತ್ರ ಮಳಿಗೆ ಬ್ರ್ಯಾಂಡ್ ಫೀ ಯು ಜುಲೈ 31 ಗುರುವಾರ ಸಂಜೆ ಆರಂಭಗೊಂಡಿತು.

ಮಳಿಗೆಯ ಉದ್ಘಾಟನೆಯನ್ನು ಬದರ್ ಮಸೀದಿ ಅರಂಬೂರು ಖತೀಬರಾದ ಬಹು| ಮುಈನುದ್ದೀನ್ ಫೈಝಿಯವರು ಇದ್ದರು. ನಂತರ ದುಆಶೀರ್ವಚನಗೈದು ಶುಭ ಹಾರೈಸಿದರು. ವಸ್ತ್ರ ವಿನ್ಯಾಸ ಹಾಗೂ ಉದ್ದಿಮೆಯಲ್ಲಿ ಅನುಭವ ಹೊಂದಿರುವ ಯುವ ಉದ್ಯಮಿ ಸಹೋದರರ ಮಾಲಕತ್ವದಲ್ಲಿ ಕಾರ್ಯಾಚರಿಸುತ್ತಿರುವ ಈ ಮಳಿಗೆಯಲ್ಲಿ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್, ವಾಟ್ಸಾಪ್ ಮುಂತಾದ ಆನ್‌ಲೈನ್ ಪ್ಲಾಟ್‌ಫಾರ್ಮ್ ಮೂಲಕ ಬಟ್ಟೆಗಳನ್ನು ರವಾನಿಸುವ ಕಾರ್ಯಕ್ಕೆ ಮುಂದಾಗಿದೆ, ಸ್ಥಳೀಯರಿಗೂ ಉಪಯುಕ್ತವಾಗುವ ನೆಲೆಯಲ್ಲಿ ಕೈಗಟಕುವ ರಿಯಾಯಿತಿ ದರದಲ್ಲಿನ ಮಕ್ಕಳಿಗೆ, ಮಹಿಳೆಯರಿಗೆ ಹಾಗೂ ಪುರುಷರ ವಿನೂತನ ವಸ್ತ್ರಗಳು ಸಂಗ್ರಹವಾಗಿದೆ ಬ್ರಾಂಡ್ ಫೀ ಸ್ಟೋರ್

ಕಾರ್ಯಕ್ರಮದಲ್ಲಿ ಮುನೀರ್ ಸುಳ್ಯ,ಫೈಝಲ್ ಕಟ್ಟೆಕ್ಕಾರ್, ಯೂಸುಫ್ ಅಂಜಿಕ್ಕಾರ್, ಉಮ್ಮರ್ ಬುಶ್ರಾ, ಅಬ್ಬಾಸ್ ಮಾಂಬ್ಲಿ ಹಮೀದ್ ಪಿ.ಆರ್ ಹಾಗೂ ಸ್ಥಳೀಯರು ಉಪಸ್ಥಿತರಿದ್ದು, ಅಸೀಫ್ ಪನ್ನೆ ಕಾರ್ಯಕ್ರಮವನ್ನು ನಿರೂಪಿಸಿದರು.

m

Related Posts