ವಿಪರೀತ ಮಳೆಯಿಂದ ಶಿರಾಡಿ ಗ್ರಾಮದ ಮುಂಡಾಜೆ – ಕುದ್ಕುಳಿ -ಬರಮೇಲು ಮುಖ್ಯ ರಸ್ತೆಯ ಬದಿಯಲ್ಲಿ ಹರಿಯುವ ನದಿಯಿಂದ ನೀರು ರಸ್ತೆಯಲ್ಲಿ ಹರಿದು ರಸ್ತೆ ಹಾನಿಯಾದ ಸ್ಥಳಕ್ಕೆ ಮಾನ್ಯ ಶಾಸಕರು ಭೇಟಿಯಾಗಿ ಸ್ಥಳ ಪರಿಶೀಲನೆ ನಡೆಸಿದರು, ಸುಮಾರು 200mtrನಷ್ಟು ತಡೆಗೋಡೆ ಇಲ್ಲದೆ ನೀರು ರಸ್ತೆಯಲ್ಲಿ ಹರಿದು ಬಂದು ಪಕ್ಕದ ಕೃಷಿತೋಟಗಳಿಗೂ ಹಾನಿಯಾಗಿರುವುದನ್ನು ಸ್ಥಳಿಯರು ಶಾಸಕರಿಗೆ ಮನವರಿಕೆ ಮಾಡಿದರು.

ಈ ಸಂದರ್ಭದಲ್ಲಿ ಭಾಸ್ಕರ ಇಚಲಂಪಾಡಿ,ಮಧುಸೂದನ್ ಕೊಂಬಾರು, ಕಿಶೋರ ಶಿರಾಡಿ,ಪ್ರಕಾಶ್ ಶಿರಾಡಿ, ಪಂಚಾಯತ್ ಸದಸ್ಯ ಲಕ್ಷ್ಮಣ ಹಾಗೂ ಊರಿನವರು ಉಪಸ್ಥಿತರಿದ್ದರು.





m
