ಈ ಭಾಗದಲ್ಲಿ ಹಲವಾರು ಬಾರಿ ಕುಡಿಯುವ ನೀರಿನ ಪೈಪು ಒಡೆದು ನೀರು ಪೋಲು ಆಗಿದ್ದರು.. ಸರಿಯಾದ ದುರಸ್ತಿ ಕಾರ್ಯ ನಡೆಯದೇ ಮತ್ತೆ ಮತ್ತೆ ನೀರಿನ ಪೈಪು ಒಡೆದು ಕುಡಿಯುವ ನೀರು ಪೋಲು ಆಗುತ್ತಿದೆ ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಸುಳ್ಯ, ಆಗಸ್ಟ್ 12
ಸುಳ್ಯ ರಥಬೀದಿ ತಿರುವು ರಸ್ತೆಯಲ್ಲಿ ಕುಡಿಯುವ ನೀರಿನ ಪೈಪು ಒಡೆದು ನೀರು ಬೊಬ್ಬಳಿಸಿ ಹರಿಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ರಸ್ತೆ ಮಧ್ಯದಲ್ಲಿ ಹರಿಯುವ ನೀರು ವಾಹನ ಸವಾರರಿಗೆ ತೊಂದರೆಯಾಗಿ ಪರಿಣಮಿಸಿದ್ದು, ಹತ್ತಿರವಿರುವ ಅಂಗಡಿಗಳಿಗೆ ಮತ್ತು ಜನ ಸಂಚಾರಕ್ಕೂ ಅಡಚಣೆ ಉಂಟಾಗಿದೆ. ಅದೇ ಸ್ಥಳದಲ್ಲಿ ಈ ಮೊದಲು ಸಹ ಕುಡಿಯುವ ನೀರಿನ ಪೈಪು ಒಡೆದು ನೀರು ಪೋಲುಗಿದ್ದು ಸರಿಯಾ ದುರಸ್ತಿ ಆಗಿರಲಿಲ್ಲ ದುರಸ್ತಿಗೆ ಸಂಬಂಧಿಸಿ ಇಲಾಖೆಯಿಂದ ಯಾವುದೇ ಕ್ರಮ ಕೈಗೊಳ್ಳಲಾಗದಿರುವುದು ನಿರ್ಲಕ್ಷ್ಯವನ್ನೇ ಸೂಚಿಸುತ್ತಿದೆ. ಹೀಗೆ ನಿರ್ವಹಣಾ ಅವ್ಯವಸ್ಥೆಯಿಂದಾಗಿ ಅಮೂಲ್ಯವಾದ ಕುಡಿಯುವ ನೀರು ನಷ್ಟವಾಗುತ್ತಿದೆ. ಇದರೊಂದಿಗೆ ನಗರಿಯ ಪಾಲನೆಯ ದುರ್ಬಲತೆ ಮತ್ತೊಮ್ಮೆ ಬೆಳಕಿಗೆ ಬಂದಿದೆ.
ಸ್ಥಳೀಯರು ಸಂಬಂಧಿತ ಅಧಿಕಾರಿಗಳ ಗಮನ ಸೆಳೆಯುತ್ತಾ, ತುರ್ತು ಕ್ರಮ ಕೈಗೊಂಡು ತಕ್ಷಣ ಪೈಪು ದುರಸ್ತಿ ಕಾರ್ಯ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.






m

