Featured, ಇತರೆ, ಸ್ಥಳೀಯ

ಸುಳ್ಯ: ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬೃಹತ್ ಸ್ವಚ್ಛತಾ ಕಾರ್ಯಕ್ರಮ

ಸುಳ್ಯ: ಸಂಪಾಜೆ ಗ್ರಾಮ ಪಂಚಾಯತ್‌ನ ನೇತೃತ್ವದಲ್ಲಿ ಮಾದರಿ ಬೃಹತ್ ಸ್ವಚ್ಚತಾ ಕಾರ್ಯಕ್ರಮ. ವಿವಿಧ ಸಂಘಟನೆಗಳು, ಸಾರ್ವಜನಿಕ ಮತ್ತು ಖಾಸಗಿ ವಲಯದ ಪ್ರತಿನಿಧಿಗಳು ಈ ಅಭಿಯಾನದಲ್ಲಿ ಉತ್ಸಾಹದಿಂದ ಭಾಗವಹಿಸಿದರು.

ಗ್ರಾಮ ಮಟ್ಟದ ಸಂಘಟನೆಗಳು, ವಿವಿಧ ಧಾರ್ಮಿಕ, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಅಧಿಕಾರಿಗಳು, ಜನಪ್ರತಿನಿಧಿಗಳು, ವ್ಯಾಪಾರಸ್ಥರು ಮಂಡಲ, ಸಂಜೀವಿನಿ ಒಕ್ಕೂಟ, ಆಟೋ ಚಾಲಕ ಮಾಲಕರ ಸಂಘ, ಲಯನ್ಸ್ ಕ್ಲಬ್ ಸದಸ್ಯರು, ಸ್ಥಳೀಯ ನಾಗರಿಕರು ಮುಕ್ತ ಮನಸ್ಸಿನಿಂದ ಈ ಕಾರ್ಯಕ್ರಮಕ್ಕೆ ಕೈಜೋಡಿಸಿದರು.
ಕಾರ್ಯಕ್ರಮದ ಅಂಗವಾಗಿ, ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ಶಾಲಾ ವಠಾರಗಳು, ರಿಕ್ಷಾ ಪಾರ್ಕ್, ಸರ್ಕಾರಿ ಕಟ್ಟಡಗಳು, ಅಂಗನವಾಡಿ ಕೇಂದ್ರಗಳು ಹಾಗೂ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಕಲ್ಲುಗುಂಡಿ ಪೇಟೆಯಿಂದ ಗೂನಡ್ಕ ಪೇಟೆ ತನಕ 5 ಕಿ.ಮೀ ದೂರದವರೆಗೆ ಶ್ರದ್ಧೆಯಿಂದ ಶ್ರಮದಾನ.
ಈ ಅಭಿಯಾನವು ಜನಜಾಗೃತಿ ಮೂಡಿಸುವ ಜೊತೆಗೆ ಪರಿಸರ ಸಂರಕ್ಷಣೆಯ ಪ್ರಾಮುಖ್ಯತೆ ಕುರಿತು ಸಂದೇಶ ಹರಡಿತು. ಸ್ಥಳೀಯರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿದ್ದು, ಸಂಪೂರ್ಣ ಗ್ರಾಮಗಳ ನಿರ್ಮಾಣದ ಒಂದು ಹೆಜ್ಜೆ ದೃಢಪಟ್ಟಿದೆ ಸಾಕ್ಷಿಯಾಗಿದೆ

ಭಾಗವಹಿಸಿದ ಪ್ರಮುಖರು

ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಮತಿ ಶಕ್ತಿವೇಲು ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಆಗಮಿಸಿದ ಪೇರಡ್ಕ ಜುಮ್ಮಾ ಮಸೀದಿ ಖತೀಬ್ ಉಸ್ತಾದ್ ನಹೀಮ್ ಫೈಝಿ, ಕಲ್ಲುಗುಂಡಿ ಜುಮ್ಮಾ ಮಸೀದಿ ಖತೀಬ್ ಉಸ್ತಾದ್. ನಾಸಿರ್ ದಾರಿ ನಿವೃತ ಸೈನಿಕರು ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಗದೀಶ್ ಕೆ. ಪಿ. ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷರಾದ ಟಿ . ಎಂ. ಶಾಹಿದ್ , ಲಯನ್ಸ್ ಕ್ಲಬ್ ಅಧ್ಯಕ್ಷರಾದ ಕಿಶೋರ್ ಕುಮಾರ್ ಅವರು ಸಂದರ್ಭೋಚಿತವಾಗಿ ನಡೆದ
ಗ್ರಾಮ ಪಂಚಾಯತ್ ಸದಸ್ಯರು ಸೊಸೈಟಿ ನಿರ್ದೇಶಕರಾದ ಜಿ ಕೆ . ಹಮೀದ್ ಗೂನಡ್ಕ ಸ್ವಾಗತಿಸಿ ಪಂಚಾಯತ್ ಅಧ್ಯಕ್ಷರಾದ ಎಸ್ ಕೆ. ಹನೀಫ್ ಉಡುಗೊರೆ ಈ ಪ್ರಶಸ್ತಿ ಕಾರ್ಯಕ್ರಮದ ಸಂಜೆ ಗ್ರಾಮದ ಸರ್ವ ನಾಗರಿಕರು ಜನ ಪ್ರತಿನಿಧಿಗಳು ಗ್ರಾಮದ ಎಲ್ಲಾ ಸಂಘ ಸಂಸ್ಥೆಗಳು ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಅಧಿಕಾರಿಗಳು ನಿವೃತ ಸೈನಿಕರು, ಧಾರ್ಮಿಕ ಕೇಂದ್ರಗಳ ಮುಖ್ಯಸ್ಥರು ಯುವಕ ಮಂಡಲ, ಸಂಜೀವಿನಿ ಒಕ್ಕೂಟ, ಲಯನ್ಸ್ ಕ್ಲಬ್.ಸಹಕಾರಿ ಸಂಘ ವಾಹನ ಚಾಲಕರು ಬಾಗವಹಿಸಿ ಮಾತನಾಡುವುದರ ಬಗ್ಗೆ ವಿಶೇಷ ಗಮನ ಸೆಳೆದರು

[html_ಬ್ಲಾಕ್ ಐಡಿ=”10105″]
[html_ಬ್ಲಾಕ್ ಐಡಿ=”10007″]

Related Posts