ಅಧ್ಯಕ್ಷರಾಗಿ ಶರತ್ ಅಡ್ಯಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ಸಿದ್ದೀಕ್ ಗೂನಡ್ಕ ಪುನರಾಯ್ಕೆ

ಸುಳ್ಯ : ಸುಳ್ಯ ಸಾರ್ವಜನಿಕರಿಗೆ ತುರ್ತು ಆರೋಗ್ಯ ಸೇವೆ ವಿಚಾರದಲ್ಲಿ ಮತ್ತು ಆಪತ್ಕಾಲ ಸಮಯ ಸಂದರ್ಭದಲ್ಲಿ ಮುಂಚೂಣಿ ಯಲ್ಲಿ ನಿಂತು ಸ್ಪಂದಿಸುವ ಸುಳ್ಯ ತಾಲೂಕು ಆಂಬ್ಯುಲೆನ್ಸ್ ಚಾಲಕ ಮಾಲಕರ ಸಂಘದ ಮಹಾಸಭೆ ಸುಳ್ಯ ನಾವೂರು ರಸ್ತೆಯಲ್ಲಿ ಇರುವ ವೆಲೆನ್ಸಿಯ ಟವರ್ ನ ಸಂಸ್ಥೆಯ ಕಛೇರಿಯಲ್ಲಿ ಆಗಸ್ಟ್ 14 ರಂದು ಜರಗಿತು
ಸಂಘದ ಅಧ್ಯಕ್ಷರಾದ ಶರತ್ ಅಡ್ಯಡ್ಕ ಅರಂತೋಡು ಅವರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆ ಕಾರ್ಯಕರ್ಮದ ಉದ್ಘಾಟನೆಯನ್ನು ಗೌರವ ಅಧ್ಯಕ್ಷರಾದ ಶಿವಪ್ರಸಾದ್ ಕೆ ಜೆ ಕೊಡಿಯಾಲಬೈಲು ರವರು ನೆರವೇರಿಸಿದರು ಸಭೆಗೆ ಆಗಮಿಸಿದ ತಾಲೂಕು ಆಂಬ್ಯುಲೆನ್ಸ್ ಚಾಲಕ ಮಾಲಕರನ್ನು ಸಂಘದ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಗೂನಡ್ಕ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು ಸಭೆಯಲ್ಲಿ ವರದಿಯನ್ನು ಪ್ರದೀಪ್ ಪಂಜ ವಾಚಿಸಿದರು ಕೋಶಾಧಿಕಾರಿ ರಫೀಕ್ ಬಿ ಎಮ್ ಲೆಕ್ಕ ಪತ್ರ ಮಂಡನೆ ಮಂಡಿಸಿದರು
ಆ ಬಳಿಕ ಮಾತನಾಡಿದ ಸಂಘದ ಉಪಾಧ್ಯಕ್ಷರಾದ ಉನೈಸ್ ಪೆರಾಜೆರವರು ಸಂಘದ ಅಭಿವೃದ್ಧಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿ ಮುಂದಿನ ಕಾರ್ಯ ಯೋಜನೆಯ ಪಟ್ಟಿಗಳನ್ನು ತಯಾರಿಸಿದರು, ಮೀಡಿಯಾ ಕಾರ್ಯದರ್ಶಿಯಾದ ರಫೀಕ್ ಬಾಳೆಮಕ್ಕಿ ಸಭೆಯಲ್ಲಿ ಓದಿ ತಿಳಿಸಿದರು
ನೂತನ ಕಾರ್ಯಕಾರಿ ಸಮಿತಿ,ರಚನೆ
ನೂತನ ಸಮಿತಿಗೆ ಕ್ಯಾಬಿನೆಟ್ ನಾಯಕರಾಗಿ 15 ಮಂದಿಯನ್ನು ನೇಮಿಸಲಾಯಿತು
ಗೌರವ ಅಧ್ಯಕ್ಷರಾಗಿ ಶಿವಪ್ರಸಾದ್ ಕೊಡಿಯಲ್ ಬೈಲು ,ಅಧ್ಯಕ್ಷರಾಗಿ ಶರತ್ ಅಡ್ಯಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ಸಿದ್ದೀಕ್ ಗೂನಡ್ಕ ,ಕೋಶಾಧಿಕಾರಿಯಾಗಿ ರಫೀಕ್ ಬಿ ಎಂ ಎ ,ಉಪಾಧ್ಯಕ್ಷರಾಗಿ ಹುನೈಸ್ ಪೆರಾಜೆ , ಜೊತೆ ಕಾರ್ಯದರ್ಶಿ ಮಿಥುನ್ ಸುಳ್ಯ ,ಕಾರ್ಯದರ್ಶಿ ಪುನೀತ್ ಸಂಕೇಶ ಕುಕ್ಕುಜಡ್ಕ, ಸಂಘಟನಾ ಕಾರ್ಯದರ್ಶಿ ತಾಜುದ್ದೀನ್ ಟರ್ಲಿ ,ಮೀಡಿಯಾ ಕಾರ್ಯದರ್ಶಿ ಅಬ್ದುಲ್ ರಝಕ್, ( ಅಚ್ಚು ) ,ರೆಸ್ಕ್ಯೂ ಕಾರ್ಯದರ್ಶಿ ಬಷೀರ್ ಆರ್ ಬಿ ,ಕಾನೂನು ಸಲಹೆಗಾರರಾಗಿ ಕೇಶವ ಚಂದ್ರ ಭಟ್ ಬೆಳ್ಳಾರೆ ,ಮತ್ತು ವಿಭಾಗವಾರು ಸಹಾಯಕ ಕಾರ್ಯದರ್ಶಿಗಳಾಗಿ ಫೈನಾನ್ಸಿಯಲ್ ರಫೀಕ್ ಬಾಳೆ ಮಕ್ಕಿ ,ಸಂಘಟನಾ ಶಮೀರ್ ಸಿ ಎ ,ರೆಸ್ಕ್ಯೂ ಶರತ್ ಕಲ್ಲುಗುಂಡಿ ,ಮೀಡಿಯಾ ಉದಯ ಪಂಜ ರವರು ಆಯ್ಕೆಯಾದರು
ಕಾರ್ಯಕಾರಿ ಸಮಿತಿ ಸದಸ್ಯರು
ಕಾರ್ಯಕಾರಿ ಸಮಿತಿ ಗೆ ವಿನಯ್ ಅರಂತೋಡು,ಹಮೀದ್ ಬೆಳ್ಳಾರೆ,ಸಿದ್ದೀಕ್ ಜಟ್ಟಿಪಳ್ಳ,ಹನೀಫ್ ಜಯನಗರ ಜಯಪ್ರಕಾಶ್ ನೆಕ್ರಾಜೆ, ಪ್ರಶಾಂತ, ಸೀತಾರಾಮ ಮಡಿಕೇರಿ, ಹಿಮಕರ ಊರುಬೈಲು,ಪ್ರದೀಪ್ ಪಂಜ,ಪ್ರಥ್ವಿರಾಜ್ ಬೆಳ್ಳಾರೆ,ಕಿರಣ್ ಕುಮಾರ್ ಸುಳ್ಯ, ಸದಾಶಿವ ಬೆಳ್ಳಾರೆ, ಅನುಪ್ ಬೆಳ್ಳಾರೆ, ಬಾಲಸುಬ್ರಹ್ಮಣ್ಯಂ ದುಗ್ಗಲಡ್ಕ, ಇವರನ್ನು ಅಯ್ಕೆ ಮಾಡಲಾಯಿತು.
ಕಾರ್ಯಕ್ರಮದ ಕೊನೆಯಲ್ಲಿ ಸಂಘದ ಕಾರ್ಯದರ್ಶಿ ಪುನೀತ್ ಸಂಕೇಶರವರು ಕಾರ್ಯಕ್ರಮಕ್ಕೆ ಆಗಮಿಸಿದವರಿಗೆ ಧನ್ಯವಾದ ಸಮರ್ಪಿಸಿದರು.





m

