Featured, ಆರೋಗ್ಯ, ಸ್ಥಳೀಯ

ಸೌದಿ ಅರೇಬಿಯಾಗೆ ಔಷಧ ಕೊಂಡೊಯ್ಯುವ ಪ್ರಯಾಣಿಕರಿಗೆ ಅನುಮತಿ ಕಡ್ಡಾಯ – SFDA ಹೊಸ ನಿಯಮ

ರಿಯಾದ್: ಸೌದಿ ಅರೇಬಿಯಾಗೆ ಪ್ರಯಾಣಿಸುವವರು ತಮ್ಮೊಂದಿಗೆ ಔಷಧಗಳನ್ನು ಕೊಂಡೊಯ್ಯುವಾಗ ಹೊಸ ನಿಯಮಗಳನ್ನು ತಪ್ಪದೇ ಪಾಲಿಸಬೇಕೆಂದು ಸೌದಿ ಸರ್ಕಾರ ಸ್ಪಷ್ಟಪಡಿಸಿದೆ. ಸೌದಿ ಆಹಾರ ಮತ್ತು ಔಷಧ ಪ್ರಾಧಿಕಾರ (SFDA) ಜಾರಿಗೆ ತಂದಿರುವ ಈ ನಿಯಮದಂತೆ, ಕೆಲವು ನಿಯಂತ್ರಿತ ಔಷಧಗಳ ಸಾಗಣೆಗಾಗಿ ಮುಂಚಿತ ಅನುಮತಿ ಪಡೆಯುವುದು ಈಗ ಕಡ್ಡಾಯವಾಗಿದೆ.

ನೋವು ನಿವಾರಕಗಳು, ನಿದ್ರೆ ಮಾತ್ರೆಗಳು, ಮನೋವೈದ್ಯಕೀಯ ಔಷಧಿಗಳು ಸೇರಿದಂತೆ ಹಲವಾರು ನಿಯಂತ್ರಿತ ಔಷಧಗಳನ್ನು ಸಾಗಿಸುವ ಮುನ್ನ, ಪ್ರಯಾಣಿಕರು SFDA ಯ Controlled Drugs System (CDS) ಆನ್‌ಲೈನ್ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು.

SFDA ಈ ಹೊಸ ಕ್ರಮವನ್ನು ಪೋರ್ಟ್‌ಗಳಲ್ಲಿ ಸಮಸ್ಯೆ ಹಾಗೂ ವಿಳಂಬ ತಪ್ಪಿಸುವ

ಪ್ರಯಾಣಿಕರು ಕಾನೂನುಬದ್ಧವಾಗಿ ತಮ್ಮ ವೈದ್ಯಕೀಯ ಅಗತ್ಯಗಳನ್ನು ಪೂರೈಸುವ ಉದ್ದೇಶದಿಂದ ರೂಪಿಸಿದೆ.

ಅನುಮತಿ ಇಲ್ಲದೇ ಔಷಧ ಸಾಗಣೆ ಮಾಡಿದರೆ ಕಾನೂನು ಉಲ್ಲಂಘನೆಯಾಗಿ ಪರಿಗಣಿಸಲಾಗುತ್ತದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ, ಸೌದಿ ಪ್ರವಾಸಕ್ಕೆ ಹೊರಡುವ ಪ್ರಯಾಣಿಕರಿಗೆ ಈ ನಿಯಮಗಳ ಜಾಗೃತಿ ಅನಿವಾರ್ಯವಾಗಿದೆ.

m

Related Posts