ಸೋಣಂಗೇರಿ ಅಂಗನವಾಡಿ ಪುಟಾಣಿ ಮಕ್ಕಳಿಗೆ ಚಯರ್ ಕೊಡುಗೆ
ಪೈಚಾರ್: ಸುಳ್ಯ ತಾಲೂಕಿನ ಸಾಮಾಜಿಕ, ಶೈಕ್ಷಣಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿರುವ ಅಸ್ತ್ರ ಸ್ಪೋರ್ಟ್ಸ್ ಕ್ಲಬ್ (ರಿ), ಪೈಚಾರ್ ತನ್ನ ಸಮಾಜಮುಖಿ ಕಾರ್ಯಚಟುವಟಿಕೆಗಳ ಓರೆಯಾಗಿ ಮತ್ತೊಮ್ಮೆ ಮಾನವೀಯತೆ ಮೆರೆದಿದೆ. ಕ್ಲಬ್‌ನಿಂದ ಸೋಣಂಗೇರಿ ಅಂಗನವಾಡಿ ಕೇಂದ್ರದ ಪುಟಾಣಿ ಮಕ್ಕಳಿಗೆ ಕುಳಿತುಕೊಳ್ಳಲು ಚೇರ್‌ಗಳನ್ನು ದಾನವಾಗಿ ನೀಡಲಾಯಿತು.

ಶಿಕ್ಷಣದ ಆರಂಭಿಕ ಹಂತದಲ್ಲೇ ಮಕ್ಕಳಿಗೆ ಸೂಕ್ತ ಪಾಠವಾತಾವರಣ ಕಲ್ಪಿಸುವ ಉದ್ದೇಶದಿಂದ ಈ ಸಹಾಯ ಹಸ್ತ ವಿಸ್ತರಿಸಲಾಗಿದೆ. ಮುದ್ದಾದ ಮಕ್ಕಳಿಗೆ ಚೇರ್‌ಗಳ ರೂಪದಲ್ಲಿ ಕಲಿಕೆ ಜಗತ್ತಿಗೆ ಪ್ರೇರಣೆಯ ಹಂಬಲ ನೀಡಿದ ಅಸ್ತ್ರ ಕ್ಲಬ್‌ನ ಈ ಕಾರ್ಯವು ಸ್ಥಳೀಯರಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.

ಈ ಸಂದರ್ಭದಲ್ಲಿ ಕ್ಲಬ್‌ನ ಅಧ್ಯಕ್ಷ ರಿಫಾಯಿ ಎಸ್ ಎ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಿ ಕುಸುಮಾವತಿ, ಅಂಗನವಾಡಿ ಶಿಕ್ಷಕಿ ರವಿಕಲ, ಸಂಘಟನೆಯ ಪ್ರಧಾನ ಕಾರ್ಯದರ್ಶಿ ನಾಸಿರ್ ಕೆ.ಪಿ, ಜೊತೆ ಕಾರ್ಯದರ್ಶಿ ಝುಬೈರ್ ಶಾಂತಿನಗರ, ಸದಸ್ಯ *ಅಶ್ರಫ್ ಪೈಚಾರ್* ಹಾಗೂ ಶಾಲೆಯ ಸಹ ಶಿಕ್ಷಕರು ಉಪಸ್ಥಿತರಿದ್ದರು.