ತುಮಕೂರು
ತುಮಕೂರು ಬ್ಯಾಡ್ಮಿಂಟನ್ ಅಕಾಡೆಮಿ, ಭಾರತೀಯ ಮೆಡಿಕಲ್ ಅಸೋಸಿಯೇಷನ್ (ಭಾರತೀಯ ವೈದ್ಯಕೀಯ ಸಂಘ) ತುಮಕೂರು ಇವರು ಆಗಸ್ಟ್ 16 ಮತ್ತು 17 ರಂದು ನಿರ್ವಹಿಸಿದ 28ನೇ ಸೋಮಣ್ಣ ಸ್ಮಾರಕ ಶಟಲ್ ಪಂದ್ಯಾವಳಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಸುಳ್ಯದ ವೈದ್ಯ ಡಾ| ಕಾರ್ತಿಕ್ ಆರ್ ಚಂದ್ರ ಹಾಗೂ ಮೂಡಬಿದಿರೆಯ ಡಾ| ವಿನಯ್ ಆಳ್ವ ಇವರು ಉತ್ತಮ ಆಟದ ಪ್ರದರ್ಶನದೊಂದಿಗೆ ಪ್ರಥಮ ಸ್ಥಾನಿಯಾಗಿ ರಾಷ್ಟ್ರ ಮಟ್ಟಕ್ಕೆ ಅಯ್ಕೆ ಯಾಗುತ್ತಾರೆ,

ಇದೇ ಜೋಡಿ ಕಳೆದ ಸಾಲಿನಲ್ಲಿ ನಡೆದ ಆಕ್ಸ್‌ಫರ್ಡ್ ಮೆಡಿಕಲ್ ಕಾಲೇಜು ಮತ್ತು ಹೆಲ್ತ್ ಟೆಕ್ನಾಲಜಿ, ಬೆಂಗಳೂರು ನಿರ್ವಹಿಸಿದ ರಾಜ್ಯಮಟ್ಟದ ಪಂದ್ಯಾವಳಿಯಲ್ಲಿ ಪುರುಷರ ಡಬಲ್ಸ್ ಪಂದ್ಯವಾಗಿ ಮೂಡಿಬಂದಿದ್ದರು
ಡಾ|ಕಾರ್ತಿಕ್ ಆರ್ ಚಂದ್ರ ಇವರು ಜಟ್ಟಿಪಳ್ಳದ ರಾಮಚಂದ್ರ ಪೆಲ್ತಡ್ಕ ಮತ್ತು ಬಿ ಜೆ ರಾಧಮಣಿ ದಂಪತಿಗಳ ಸುಪುತ್ರ ಡಾ|ವಿನಯ್ ಆಳ್ವ ಇವರು ಖ್ಯಾತ ಸರ್ಜನ್ ಆಗಿದ್ದು ಮೂಡಬಿದಿರೆಯ ಆಳ್ವಾಸ್ ವಿದ್ಯಾಸಂಸ್ಥೆಯ ಸ್ಥಾಪಕ ಡಾ|ಮೋಹನ್ ಆಳ್ವ ರವರ ಸುಪುತ್ರ




m

