ಹೈದರಾಬಾದ್, ಆಗಸ್ಟ್ 18 ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಹೈದರಾಬಾದ್‌ನ ರಾಮಂತಪುರದ ಗೋಕುಲೇನಗರದಲ್ಲಿ ಭಾನುವಾರ ಮಧ್ಯರಾತ್ರಿ ಜರಗುತ್ತಿದ್ದ ಮೆರವಣಿಗೆಯ ವೇಳೆ ಭೀಕರ ವಿದ್ಯುತ್ ದುರಂತ ಸಂಭವಿಸಿ ಐವರು ಸ್ಥಳದಲ್ಲೇ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ನಡೆದಿದೆ.

ಮೆರವಣಿಗೆಯ ರಥ ಎಳೆಯುತ್ತಿದ್ದ ವಾಹನ ತಾಂತ್ರಿಕ ದೋಷದಿಂದ ನಿಂತಿದ್ದ ಹಿನ್ನೆಲೆಯಲ್ಲಿ ಯುವಕರು ಕೈಯಿಂದಲೇ ರಥವನ್ನು ದೂಡುತ್ತಿದ್ದ ಸಂದರ್ಭದಲ್ಲಿ, ರಥದ ಮೇಲ್ಭಾಗವು ರಸ್ತೆಯ ಬದಿಯಲ್ಲಿದ್ದ ವಿದ್ಯುತ್ ತಂತಿಗೆ ತಾಗಿದ್ದರಿಂದ ಒಬ್ಬರ ಮೇಲೆ ಒಂದರಂತೆ ಒಂಬತ್ತು ಮಂದಿಗೆ ವಿದ್ಯುತ್ ಆಘಾತ ತಗುಲಿತು. ಈಪೈಕಿ ಐದು ಮಂದಿ ಸ್ಥಳದಲ್ಲೇ ಮೃತಪಟ್ಟರೆ, ಇತರ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತಪಟ್ಟವರು ಕೃಷ್ಣ ಯಾದವ್ (21), ಸುರೇಶ್ ಯಾದವ್ (34) ಶ್ರೀಕಾಂತ್ ರೆಡ್ಡಿ (35) ರುದ್ರ ವಿಕಾಸ್ (39) ರಾಜೇಂದ್ರ ರೆಡ್ಡಿ (15) ಎಂದು ಗುರುತಿಸಲಾಗಿದೆ,
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಗಾಯಾಳುಗಳನ್ನು ತುರ್ತು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರ ಪೈಕಿ ಕೇಂದ್ರ ಸಚಿವ ಕಿಶನ್ ರೆಡ್ಡಿಯವರ ಆಪ್ತ ಸಹಾಯಕ ಗಣೇಮೆನ್ ಶ್ರೀನಿವಾಸ್ ಕೂಡ ಇರುತ್ತಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ಆರಂಭಿಸಲಾಗಿದೆ. ವಿದ್ಯುತ್ ಇಲಾಖೆ ಮತ್ತು ಸ್ಥಳೀಯ ಆಡಳಿತದ ನಿರ್ಲಕ್ಷ್ಯ ವಿರುದ್ಧ ಸಾರ್ವಜನಿಕರಲ್ಲಿ ಆಕ್ರೋಶ ವ್ಯಕ್ತವಾಗಿದೆ.





m

