ಗಂಜೀಮಠ ಗ್ರಾಮ ಪಂಚಾಯತ್ ವ್ಯಾಪ್ತಿಯ ತೆಂಕ ಉಳಿಪಾಡಿ ಗ್ರಾಮದ ಪುರಾತನ ಮಸೀದಿಗಳಲ್ಲಿೊಂದಾದ ಮಳಲಿ ಮಸೀದಿಯಲ್ಲಿ ಈ ಬಾರಿ ಈದ್ ಮಿಲಾದ್ ಉತ್ಸವವನ್ನು ಸೌಹಾರ್ದದ ವಾತಾವರಣದಲ್ಲಿ ಆಚರಿಸಲಾಯಿತು.

ಮಳಲಿ ಹಳ್ಳಿಯು ಆರಂಭದಿಂದಲೂ ಹಿಂದೂ-ಮುಸ್ಲಿಂ ಭೇದವಿಲ್ಲದೆ ಎಲ್ಲರೂ ಒಗ್ಗಟ್ಟಿನಿಂದ ಬದುಕಿ ಬಂದಿರುವುದು ವಿಶೇಷ. ಕೆಲ ವರ್ಷಗಳ ಹಿಂದೆ ಕೆಲವು ಹೊರಗಿನ ಅಹಿತಕರ ಅಂಶಗಳು ಸೌಹಾರ್ದತೆಗೆ ಧಕ್ಕೆ ತರುವ ಪ್ರಯತ್ನ ಮಾಡಿದ್ದರೂ, ಸ್ಥಳೀಯರು ಪರಸ್ಪರ ಗೌರವದಿಂದ ಬದುಕನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಮಸೀದಿಯ ಪುನರ್‌ನಿರ್ಮಾಣದ ಸಂದರ್ಭದಲ್ಲಿ “ದೇವಾಲಯದಂತಿದೆ” ಎಂದು ಹೇಳಿ ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದರೂ, ಆ ವಿಚಾರಣೆ ಈಗ ಕೋರ್ಟ್‌ನಲ್ಲಿ ಬಾಕಿಯಿದ್ದು, ಊರಿನ ಜನರು ಮಾತ್ರ ಸ್ನೇಹಭಾವವನ್ನು ಅಡ್ಡಿಪಡಿಸದಂತೆ ನೋಡಿಕೊಂಡಿದ್ದಾರೆ.

ಇದರ ಭಾಗವಾಗಿ ಇಂದು ನಡೆದ ಮಿಲಾದ್ ರ್ಯಾಲಿಯಲ್ಲಿ, ಕಲಾವರ್ಧಕ ಯುವಕ ಮಂಡಲ ನಾರಾಳ ಸಂಕೇಶದ ಹಿಂದೂ ಬಂಧುಗಳು ಸಿಹಿತಿಂಡಿ ವಿತರಿಸಿ ಸೌಹಾರ್ದದ ಮಾದರಿಯನ್ನು ತೋರಿದರು. “ಮಳಲಿಯಲ್ಲಿ ಹೊರಗಿನ ಯಾರೇ ಬಂದು ಸೌಹಾರ್ದ ಹಾಳು ಮಾಡಲು ಯತ್ನಿಸಿದರೂ ಯಶಸ್ವಿಯಾಗುವುದಿಲ್ಲ” ಎಂಬ ಸ್ಪಷ್ಟ ಸಂದೇಶವನ್ನು ಈ ಕಾರ್ಯಕ್ರಮ ಸಾರಿತು.





m
