ಗುತ್ತಿಗಾರು: ಬದ್ರಿಯಾ ಜುಮಾ ಮಸೀದಿ ಜಮಾಅತ್ ಕಮಿಟಿಯ ಮಾಜಿ ಕೋಶಾಧಿಕಾರಿ, ಹಿರಿಯರು ಹಾಗೂ ಮಾರ್ಗದರ್ಶಕರಾದ ಮೊಯ್ದು ಕುಂಞಿ ಬಾಕಿಲ ಅವರು ಪತ್ನಿ ಸಮೇತರಾಗಿ ಉಮ್ರಾ ಯಾತ್ರೆ ಕೈಗೊಂಡಿರುವ ಹಿನ್ನೆಲೆಯಲ್ಲಿ ಜಮಾಅತ್ ಕಮಿಟಿ ವತಿಯಿಂದ ಬೀಳ್ಕೊಡುಗೆ ಕಾರ್ಯಕ್ರಮವನ್ನು ನಡೆಸಲಾಯಿತು.
ಇದೇ ಸಂದರ್ಭದಲ್ಲಿ ಲತೀಫ್ ಬಾಕಿಲ ಅವರ ತಾಯಿಯವರೂ ಉಮ್ರಾ ಯಾತ್ರೆ ಕೈಗೊಳ್ಳುತ್ತಿರುವುದರಿಂದ ಮೂವರಿಗೂ ಊರಿನ ಸಮಸ್ತರ ಪರವಾಗಿ ಶುಭಾಶಯಗಳನ್ನು ಸಲ್ಲಿಸಲಾಯಿತು.






m
