ವಿಶ್ವಪ್ರವಾದಿ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ 1500ನೇ ಜನ್ಮ ದಿನಾಚರಣೆಯನ್ನು ಅತ್ಯಂತ ವಿಜೃಂಭಣೆಯಿಂದ ಲೋಕ ಮುಸ್ಲಿಮರು ಆಚರಿಸುತ್ತಿದ್ದಾರೆ. ಪುಣ್ಯ ಪ್ರವಾದಿಯರ ಜನ್ಮದಿನದಿಂದ ಅನುಗ್ರಹೀತಗೊಂಡ ಪುಣ್ಯ ರಬೀಉಲ್ ಅವ್ವಲ್ ತಿಂಗಳಿನಲ್ಲಿ ಜಗತ್ತು ಸಂತೋಷ ದೊಂದಿಗೆ ಪ್ರಕೀರ್ತನೆಯ ಮೂಲಕ ಜನಮಾನಸದಲ್ಲಿ ಪ್ರವಾದಿ ಪ್ರೇಮದ ಸಂದೇಶ ಸಾರುತ್ತಾರೆ.
ಬಂಟ್ವಾಳ ತಾಲೂಕಿನ ಪ್ರಮುಖ ಧಾರ್ಮಿಕ ವಿದ್ಯಾ ಸಂಸ್ಥೆ ಸುನ್ನಿ ಮಹಲ್ ಮಂಚಿಯಲ್ಲಿ ಮೀಲಾದುನ್ನಬಿ ಭಾಗವಾಗಿ ಎರಡು ದಿನಗಳ ಕಾಲ ಸೀನ್ ಆರ್ಟ್ ಫೆಸ್ಟ್ 25 ವಿವಿಧ ವಿಭಿನ್ನ ಸ್ಪರ್ಧೆ ಗಳೊಂದಿಗೆ ಅತ್ಯಂತ ಯಶಸ್ವಿಯಾಗಿ ನಡೆಯಿತು. ಪ್ರಥಮ ದಿನವಾದ ಆದಿತ್ಯವಾರ ಸುನ್ನಿ ಮಹಲ್ ಮದ್ರಸ ವಿದ್ಯಾರ್ಥಿಗಳ ಟೀಂ ಅಜ್ವಾ ಮತ್ತು ಟೀಂ ಅರ್ವಾ ಎರಡು ತಂಡಗಳ ನಡುವೆ ನಡೆದ ಸ್ಪರ್ಧೆಯಲ್ಲಿ ಟೀಂ ಅರ್ವಾ ಚಾಂಪಿಯನ್ ಪಟ್ಟ ಮಡಿಲಿಗೇರಿಸಿಕೊಂಡಿದೆ.

ಎರಡನೇ ದಿನವಾದ ಸೋಮವಾರ ಮಧ್ಯಾಹ್ನ ಪ್ರಾರಂಭವಾದ ಸ್ಪರ್ಧೆಯು ಟೀಂ ಗಾಝಾ ಮತ್ತು ಟೀಂ ರಫಾ ಎಂಬ ಎರಡು ತಂಡಗಳ ನಡುವೆ ನಡೆದ ಸ್ಪರ್ಧೆಯಲ್ಲಿ ಟೀಂ ರಫಾ ಚಾಂಪಿಯನ್ ಪಟ್ಟ ಮೈಗೂಡಿಸಿಕೊಂಡಿದೆ. ಎಲ್ಲಾ ಸ್ಪರ್ಧಾರ್ಥಿಗಳಿಗೂ ಉತ್ತಮ ಬಹುಮಾನ ವಿತರಣೆ ನಡೆಯಿತು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಸಾರಥಿ ಎಣ್ಮೂರು ಉಸ್ತಾದ್, ಶರಫುದ್ದೀನ್ ಅಹ್ಸನಿ , ರಫೀಕ್ ಝುಹ್ರಿ, ಅಹ್ಮದ್ ಹಾಶಿಮಿ, ರಝ್ಝಾಕ್ ಭಾರತ್, ಅಬ್ದುಲ್ ಮುತ್ತಲಿಬ್ , ಹಮೀದ್ ಪಟ್ಟೂರಿ , ಸಹಿತ ಹಲವಾರು ಪ್ರಮುಖರು ಉಪಸ್ಥಿತರಿದ್ದರು.

ಕೂನೆಗೆ ಸ್ವಲಾತಿನೊಂದಿಗೆ ಯಶಸ್ವಿಯಾಗಿ ಕಾರ್ಯಕ್ರಮ ಕೊನೆಗೊಂಡಿತು ಎಂದು ಅಹ್ಮದ್ ಹಾಶಿಮಿ ಕುರಿಯ ಸುನ್ನಿ ಮಹಲ್ ಮಂಚಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ವರದಿ: ಅಹ್ಮದ್ ಹಾಶಿಮಿ ಕುರಿಯ





m
