ದಕ್ಷಿಣ ಕನ್ನಡ ಪೌರ ಸೇವಾ ನೌಕರರ ಸೇವಾ ಸಂಘ ದ ಅಧ್ಯಕ್ಷ ರಾಗಿ ಆಯ್ಕೆ ಗೊಂಡ ಸುಳ್ಯ ಪೌರ ಸೇವಾ ನೌಕರರ ಸಂಘ ದ ಅಧ್ಯಕ್ಷ ರಾಗಿ ಸೇವೆ ಸಲ್ಲಿಸಿದ್ದ ತಿಮ್ಮಪ್ಪ ಪಾಟಾಳಿ ಯವರು ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆ ಗೊಂಡಿದ್ದು ಇವರನ್ನು ಪೌರ ಕಾರ್ಮಿಕರ ದಿನಾಚರಣೆಯ ಸಂದರ್ಭದಲ್ಲಿ ಗೌರವಾರ್ಪಣೆ ಸಲ್ಲಿಸಿ ಅಭಿನಂದಿಸಲಾಯಿತು.
ಸುಳ್ಯ ಕ್ಷೇತ್ರ ದ ಶಾಸಕರಾದ ಸನ್ಮಾನ್ಯ ಭಾಗೀರಥಿ ಮುರುಳ್ಯ, ನಗರ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಶಿಕಲಾ ನೀರಬಿದಿರೆ, ಸುಳ್ಯ ಯೋಜನಾ ಪ್ರಾಧಿಕಾರ ಸೂಡ ಅಧ್ಯಕ್ಷ ಕೆ. ಎಂ. ಮುಸ್ತಫ, ನಗರ ಪಂಚಾಯತ್ ಉಪಾಧ್ಯಕ್ಷ ಬುದ್ಧ ನಾಯ್ಕ್, ಸ್ಥಾಯಿ ಸಮಿತಿ ಅಧ್ಯಕ್ಷೆ ಕಿಶೋರಿ ಶೇಟ್, ಮಾಜಿ ಅಧ್ಯಕ್ಷ ರು ಗಳಾದ ವೆಂಕಪ್ಪ ಗೌಡ, ವಿನಯ ಕುಮಾರ್ ಕಂದಡ್ಕ, ಸದಸ್ಯರು ಗಳಾದ ಕೆ. ಎಸ್. ಉಮ್ಮರ್, ಭಾಲಕೃಷ್ಣ ಭಟ್, ಧೀರ ಕ್ರಾಸ್ತ, ಶಿಲ್ಪ ಸುದೇವ್, ಶ್ರೀಮತಿ ಶೀಲಾ ಕುರುಂಜಿ,ನಾರಾಯಣ ಶಾಂತಿನಗರ, ರಾಜು ಪಂಡಿತ್, ಮುಖ್ಯಾಧಿಕಾರಿ ಬಸವರಾಜ್ ಮೊದಲಾದವರು ಉಪಸ್ಥಿತರಿದ್ದರು.





m
