ಇತರೆ, ಸ್ಥಳೀಯ

ರಾಜ್ಯಮಟ್ಟದ ಪ್ರೌಢ ಶಾಲಾ ವಿಭಾಗದ ಫುಟ್ಬಾಲ್ ಪಂದ್ಯ ಕೂಟಕ್ಕೆ ಆಯ್ಕೆಯಾದ ಸುಳ್ಯ ಕುಂಬರ್ಚೊಡಿನ ಮಹಮ್ಮದ್ ಹಾಝಿಂ

ಸುಳ್ಯ ತಾಲೂಕು ಕುಂಬರ್ಚೋಡಿನ ಉದಯೋನ್ಮುಖ ಫುಟ್ಬಾಲ್ ಆಟಗಾರ ಮಹಮ್ಮದ್ ಹಾಝಿಂ ಅವರು ತಮ್ಮ ಅದ್ಭುತ ಆಟದ ಕೌಶಲ್ಯದಿಂದ ರಾಜ್ಯಮಟ್ಟದ ಪ್ರೌಢಶಾಲಾ ಶಾಲಾ ವಿಭಾಗದ ಫುಟ್ಬಾಲ್ ಪಂದ್ಯ ಕೂಟಕ್ಕೆ ಆಯ್ಕೆಯಾಗಿದ್ದಾರೆ.

ಜಿಲ್ಲಾ ಮಟ್ಟದ ಪ್ರೌಢಶಾಲಾ ಶಾಲಾ ವಿಭಾಗದ ಫುಟ್ಬಾಲ್ ಪಂದ್ಯ ಕೂಟದಲ್ಲಿ ಅವರು ತೋರಿಸಿದ ಶ್ರೇಷ್ಠ ಆಟದ ಪ್ರರ್ದಶನದಿಂದ ಅವರಿಗೆ ರಾಜ್ಯಮಟ್ಟದಲ್ಲಿ ಆಡುವ ಅವಕಾಶ ಒಲಿಯಿತು

ಇವರು ಕುಂಬರ್ಚೋಡು ನಿವಾಸಿ ಹನೀಫ್ ಕೆ ಎಂ. ಹಾಗೂ ಬುಶ್ರಾ ಜಿ ಯಂ ದಂಪತಿಗಳ ಪುತ್ರರಾಗಿದ್ದರೆ ಸುಳ್ಯ ಜೂನಿಯರ್ ಕಾಲೇಜ್ ನಲ್ಲಿ 9ನೇ ತರಗತಿಯ ವಿದ್ಯಾರ್ಥಿಯಾಗಿದ್ದಾರೆ.

ಜಿಲ್ಲಾ ಮಟ್ಟದ ಪ್ರೌಢಶಾಲಾ ವಿಭಾಗದ ಪುಟ್ಬಾಲ್ ಪಂದ್ಯಕೂಟದಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನದೊಂದಿಗೆ ರಾಜ್ಯ ಮಟ್ಟಕ್ಕೆ ಆಯ್ಕೆಯಾದರು ಹಾಝಿಂ ಇವರ ಸಂಯುಕ್ತ ಎಂಪವರ್ಮೆಂಟ್ ಅಸೋಸಿಯೇಷನ್ ​​ಇದರ ಸುಳ್ಯ ಘಟಕದ ಅಧ್ಯಕ್ಷರಾದ ಫೈಸಲ್ ಕಟ್ಟೆಕ್ಕಾರ್ ಅಭಿನಂದಿಸಿದ್ದಾರೆ

m

Related Posts