ವಿಶ್ವ ಮಾನವೀಯತೆಯ ಕಣ್ಣೀರು ಬತ್ತಿ ಹೋಗಿದೆ
ಯಾವ ಹೃದಯ ಕೊರೆದು ನೋಡಿದರು ಒಂದಿಷ್ಟು ಕರುಣೆಯ ಪಸೆಯನ್ನು ಕಾಣಲಾಗ ಬಿಟ್ಟಿದೆ
ಹಸುಗೂಸುಗಳ ನೆತ್ತರು ನದಿಯಾಗಿ ಹರಿಯುತ್ತಿದೆ
ತಾಯಂದಿರ ಕಣ್ಣೀರ ಪ್ರಳಯದಲಿ ಮಕ್ಕಳ ಜಡ ತೇಲುತ್ತಿದೆ
ಎಲ್ಲೆಲ್ಲೂ ಹಸಿವಲ್ಲಿ ನರಗಿ ಉಸಿರಾಡುವ ಅಸ್ತಿಪಂಜರಗಳು
ಅಮ್ಮ ಕಾಲವಾದದ್ದು ಅಪ್ಪ ಜೀವಾವುತಿಯಾದದ್ದು ಕಂಡರು ಅಕ್ರಂದನದ ಬೊಬ್ಬೆ ಹೊಡೆಯುವಷ್ಟು ತ್ರಾಣವಿಲ್ಲವಾಗಿದೆ ಮಕ್ಕಳು ತುತ್ತು ಅನ್ನಕ್ಕಾಗಿ ಅಂಗಲಾಚುತ್ತಿರುವರು
ಹಿಡಿಯಷ್ಟು ಸಿಕ್ಕ ಅನ್ನವನ್ನು ಅಡಿಯಷ್ಟಿರುವ ತಂಗಿಗಾಗಿ ಉಣಿಸಲೋಡುವ ಮಗುವಿನ ಎದೆ ಸೀಳುವಂತೆ ಗುಂಡು ಹಾರಿಸುವ ಪಿಶಾಚಿ ಯುದ್ಧದಾಹಿಗಳು
ತಾಯಿಯ ಅಂಗೈಯಲ್ಲಿ ತೊಟ್ಟು ಹಾಲಿಗಾಗಿ ಚಿರಾಡುವ ಮಗು, ರಕ್ತವೇ ಓಡಾಟವಿಲ್ಲದ ಎದೆಯಲ್ಲಿ ಎಲ್ಲಿ ತೊಟ್ಟು ಹಾಲು, ಚೀರಾಟ ಕೊನೆಗೊಂಡದ್ದು ನಿದ್ದೆಗೆ ಮರಳಿಯಲ್ಲ
ಶಾಂತಿ ಪತಾಕೆ ಬಾನೆತ್ತರಕ್ಕೆ ಹಾರಬಿಟ್ಟರೇನು
ಕೋಣೆಯೊಳಗೆ ಸ್ನೇಹ ಸಹ ಬಾಳ್ವೆಯ ಘಣೋತ್ಕಾರ ಕೂಗಿದರೇನು
ಹಸಿವು ನರಮೇಧ ನಿಲ್ಲಿಸಲಾರವೆಂದಾದರೆ
ಕವನ : ಆಸಿಫ್ ಪನ್ನೆ





m

