Featured, ಇತರೆ, ಸ್ಥಳೀಯ

ತಮಿಳುನಾಡು : ಟಿವಿಕೆ ಪಕ್ಷದ ಬೃಹತ್ ರ್ಯಾಲಿಯಲ್ಲಿ ಕಾಲ್ತುಳಿತ : 38 ಮಂದಿ ದಾರುಣ ಮೃತ್ಯು.!!?

ತಮಿಳುನಾಡು : ಸೆಪ್ಟೆಂಬರ್ 27, 2025 ರಂದು ತಮಿಳುನಾಡಿನ ಕರೂರ್‌ನಲ್ಲಿ ನಡೆದ ಟಿವಿಕೆ ಪಕ್ಷದ ಬೃಹತ್ ರ್ಯಾಲಿಯಲ್ಲಿ ಕಾಲ್ತುಳಿತ ಸಂಭವಿಸಿ 38 ಮಂದಿ ದಾರುಣವಾಗಿ ಮೃತಪಟ್ಟ ಘಟನೆ ಇಡೀ ದೇಶವನ್ನೇ ತಲ್ಲಣಗೊಳಿಸಿದೆ
ವೆಟ್ರಿ ಕಳಗಂ (ಟಿವಿಕೆ) ಅಧ್ಯಕ್ಷ ಮತ್ತು ನಟ ವಿಜಯ್ ಅವರು ತಮ್ಮ ರಾಜ್ಯವ್ಯಾಪಿ ರಾಜಕೀಯ ಪ್ರವಾಸದ ಭಾಗವಾಗಿ ಶನಿವಾರ (ಸೆಪ್ಟೆಂಬರ್ 27, 2025) ತಮಿಳುನಾಡಿನ ಕರೂರಿನಲ್ಲಿ ಸಾರ್ವಜನಿಕ ರನ್ನು ಉದ್ದೇಶಿಸಿ ಮಾತನಾಡುತ್ತಾ ಇದ್ದ ಸಂದರ್ಭದಲ್ಲಿ ರ್ಯಾಲಿಯಲ್ಲಿ ಉಂಟಾದ ಕಾಲ್ತುಳಿತದಲ್ಲಿ ಕನಿಷ್ಠ 38 ಮೃತಪಟ್ಟರು, ಜನಸಂದಣಿಯಲ್ಲಿ ಹಲವಾರು ಜನರು ಮೂರ್ಛೆ ಹೋಗಿ ಅವರನ್ನು ಕರೂರ್ ವೈದ್ಯಕೀಯ ಕಾಲೇಜು ಆಸ್ಪತ್ರೆ ಮತ್ತು ಹತ್ತಿರದ ಖಾಸಗಿ ಆಸ್ಪತ್ರೆಗಳಿಗೆ ಕರೆದೊಯ್ಯಲಾಯಿತು ಎಂದು ವರದಿಯಾಗಿದೆ. ಕರೂರಿಗೆ ತೆರಳಿದ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ₹10 ಲಕ್ಷ ಮತ್ತು ಗಾಯಗೊಂಡು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ₹1 ಲಕ್ಷ ಪರಿಹಾರ ಘೋಷಿಸಿದರು.

m

Related Posts