Featured, ಇತರೆ, ಸ್ಥಳೀಯ

ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ,ಸುಳ್ಯ ಎ.ಪಿ.ಎಂ.ಸಿ ಯ ಮಾಜಿ ನಾಮ ನಿರ್ದೇಶಕ ಸದಸ್ಯ ಹಸಿಯಡ್ಕ ಕೇಶವ ಗೌಡ ನಿಧನ

ಕಾಂಗ್ರೆಸ್‌ ಕಾಂಗ್ರೆಸ್ ಪಕ್ಷದ ಕಟ್ಟಾಳು, ಸುಳ್ಯ ಎ.ಪಿ.ಎಂ.ಸಿ ಮಾಜಿ ನಾಮನಿರ್ದೇಶಕ ಸದಸ್ಯ ಐವರ್ನಾಡು ಗ್ರಾಮದ ಹಸಿಯಡ್ಕ ಕೇಶವ ಗೌಡ (67) ರವರು ಅನಾರೋಗ್ಯದಿಂದ  ಅ.1 ರಂದು ರಾತ್ರಿ ನಿಧನರಾದರು.

ಇವರು ಸುಳ್ಯ ಭೂ ಅಭಿವೃದ್ಧಿ ಬ್ಯಾಂಕ್ ನಾಮ ನಿರ್ದೇಶಕರಾಗಿ, ನಿಡುಬೆ ಇರ್ವೆರ್ ಉಳ್ಳಾಕುಲು ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾಗಿ, ಯುವಶಕ್ತಿ ಸಂಘದ ಹಿರಿಯ ಸದಸ್ಯರಾಗಿ ಹಾಗೂ ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದರು. ಇವರು ಪತ್ನಿ ಶ್ರೀಮತಿ ಸವಿತ,ಪುತ್ರ ಕವನ್ ಹಾಗೂ ಸೊಸೆ,ಕುಟುಂಬಸ್ಥರು,ಬಂಧುಮಿತ್ರರನ್ನು ಅಗಲಿದ್ದಾರೆ.

m

Related Posts