Featured, ಅಂಕಣ, ಸ್ಥಳೀಯ

ಸುಳ್ಯ ತಾಲೂಕು ಆಡಳಿತ ಸೌಧ ದಲ್ಲಿ ಗಾಂಧಿ ಜಯಂತಿ ಆಚರಣೆ

ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಯವರ ಆದರ್ಶ ಇಂದಿಗೂ ಪ್ರಸ್ತುತ : ಕೆ. ಎಂ. ಮುಸ್ತಫ 

ಕರ್ನಾಟಕ ಸರ್ಕಾರದ ನಿರ್ದೇಶನ ದಂತೆ ಸುಳ್ಯ ತಾಲೂಕು ಕಚೇರಿಯಲ್ಲಿ ರಾಷ್ಟ್ರ ಪಿತ ಮಹಾತ್ಮ ಗಾಂಧೀಜಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹ ದ್ದೂರ್ ಶಾಸ್ತ್ರಿ ಯವರ ಜನ್ಮ ಜಯಂತಿಯನ್ನು ಆಚರಿಸಲಾಯಿತು ಅಧ್ಯಕ್ಷತೆಯನ್ನು ಸುಳ್ಯ ತಾಲೂಕು ತಹಶೀಲ್ದಾರ್ ಶ್ರೀಮತಿ ಮಂಜುಳಾ ವಹಿಸಿದ್ದರು.

ಮುಖ್ಯ ಅತಿಥಿ ಗಳಾಗಿ ಭಾಗವಹಿಸಿದ್ದ ಸುಳ್ಯ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೆ. ಎಂ. ಮುಸ್ತಫ ಮಾತನಾಡಿ ಗಾಂಧೀಜಿ ಯವರ ತತ್ವ ಆದರ್ಶ ಗಳು ಜಗತ್ತು ಸ್ವೀಕರಿಸಿದೆ ಕಾರಣ ವಿಶ್ವ ಕಂಡ ಎಲ್ಲಾ ಸಮಾಜ ಸುಧಾರಕರ ವ್ಯಕ್ತಿತ್ವ ಆಧ್ಯಾತ್ಮಿಕತೆಯ ಮೂಲಕ ಸಿದ್ದಿಸಿದವರು ಗಾಂಧೀಜಿ ಯವರು, ಶಾಸ್ತ್ರಿ ಯವರ ಶ್ವೇತ ಕ್ರಾಂತಿ, ಹಸಿರು ಕ್ರಾಂತಿ ದೇಶ ಇಂದು ಸ್ವಾವಲಂಬನೆ ಸಾದಿಸಿದೆ ಎಂದರು.

ಸುಳ್ಯ ತಾಲೂಕು ಹಿಂದುಳಿದ ವರ್ಗಗಳ ಅಧಿಕಾರಿ ಶ್ರೀಮತಿ ಗೀತಾ, ಎಪಿಎಂಸಿ ಅಧಿಕಾರಿ ಮುದ್ದು ಕೃಷ್ಣ, ಉಪ ತಹಶೀಲ್ದಾರ್ ಚಂದ್ರ ಕಾಂತ್, ಕಂದಾಯ ನಿರೀಕ್ಷಕ ಅವಿನ್ ಪಡ್ಡoಬೈಲ್, ತಾಲೂಕು ಕಚೇರಿ ಮತ್ತು ಸರ್ವೇ ಇಲಾಖೆ ಸಿಬ್ಬಂದಿ ಗಳು ಉಪಸ್ಥಿತರಿದ್ದರು ಸುಳ್ಯ ಗ್ರಾಮ ಆಡಳಿತಾಧಿಕಾರಿ ತಿಪ್ಪೇಶ್ ಸ್ವಾಗತಿಸಿ ವಂದಿಸಿದರು.

m

Related Posts