ಇತರೆ, ಸ್ಥಳೀಯ

ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್ ಅವರಿಗೆ ಹುಟ್ಟೂರಿನಲ್ಲಿ ಭವ್ಯ ಗೌರವ ಸಮಾರಂಭ

ವಿವಿಧ ಸಂಘ ಸಂಸ್ಥೆಗಳು ಹಾಗೂ ಕಾರ್ಮಿಕ ಸಂಘಟನೆಗಳ ವತಿಯಿಂದ ಬೃಹತ್ ಸನ್ಮಾನ

ಸುಳ್ಯ ಅ‌.11: ಕರ್ನಾಟಕ ಸರ್ಕಾರದ ರಾಜ್ಯ ಕನಿಷ್ಠ ವೇತನ ಸಲಹ ಮಂಡಳಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಟಿ.ಎಂ ಶಹೀದ್ ತೆಕ್ಕಿಲ್ ಇವರಿಗೆ ವಿವಿಧ ಸಂಘ ಸಂಸ್ಥೆಗಳು ಹಾಗೂ ಕಾರ್ಮಿಕ ಸಂಘಟನೆಗಳ ವತಿಯಿಂದ ಬೃಹತ್ ಸನ್ಮಾನ ಕಾರ್ಯಕ್ರಮ ನಡೆಯಿತು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಸಮಿತಿ ಮಾಜಿ ಅಧ್ಯಕ್ಷ, ಸಹಕಾರಿ ಕ್ಷೇತ್ರದ ಮುಖಂಡ ನಿತ್ಯಾನಂದ ಮುಂಡೋಡಿ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು,

ಶಹೀದ್ ಓರ್ವ ಭರವಸೆಯ ಯುವಕ : ಡಾ. ಪ್ರಭಾಕರ ಶಿಶಿಲ

ಅರೆಬಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿ ಅಧ್ಯಕ್ಷ ಸದಾನಂದ ಮಾವಜಿ ಸ್ವಾಗತಿಸಿ ಶುಭಹಾರೈಸಿದರು. ನಿವೃತ್ತ ಪ್ರಾಂಶುಪಾಲರಾದ ಡಾ. ಪ್ರಭಾಕರ ಶಿಶಿಲ ಮಾತನಾಡಿ ನನ್ನ ವಿಧ್ಯಾರ್ಥಿಗಳನ್ನು ಉತ್ತಮ ಸ್ಥಾನಗಳಲ್ಲಿ ನೋಡುವುದು ಸಂತಸದ ವಿಷಯವಾಗಿದೆ. ಶಹೀದ್ ಓರ್ವ ಭರವಸೆಯ ಯುವಕ, ನಿರಂತರ ಶ್ರಮ, ಪ್ರಯತ್ನದಿಂದ ಇಂತಹ ಸ್ಥಾನಮಾನಗಳು ದೊರಕುತ್ತಿದೆ. ಇನ್ನಷ್ಟು ಉತ್ತಮ ಅವಕಾಶಗಳು ದೊರೆಯಲಿ ಎಂದು ಹಾರೈಸಿದರು.

ನಿಸ್ವಾರ್ಥ ಸೇವೆಗೆ ಈ ಒಂದು ಸ್ಥಾನ ಮಾನ ದೊರೆತಿದೆ : ಡಾ. ದಾಮೋದರ ಗೌಡ

ಪ್ರಯತ್ನ ಶಿಶ್ತು, ಮತ್ತು ಜಾತ್ಯಾತೀತ ಮನೋಭಾವದಿಂದ ಜನರೊಂದಿಗೆ ವ್ಯವಹರಿಸುವ ಶೈಲಿ ಮತ್ತು ಜನರಿಗಾಗಿ ಸದಾ ಸೇವೆ ಸಲ್ಲಿಸುವ ನಿಸ್ವಾರ್ಥ ಸೇವೆಗೆ ಈ ಒಂದು ಸ್ಥಾನ ಮಾನ ದೊರೆತಿದೆ. ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಎನ್ ಎಂ ಸಿ ನಿವೃತ ಪ್ರಾಂಶುಪಾಲ ಡಾ. ದಾಮೋದರ ಗೌಡ ಹಾರೈಸಿದರು.

ಸುಳ್ಯ ತಹಶಿಲ್ದಾರ್ ಮಂಜುಳಾ ಎಮ್ ಪ್ರೋ. ಬಾಲಚಂದ್ರ ಗೌಡ , ಕೆ.ಆರ್ ಗಂಗಾಧರ , ಹೇಮನಾಥ ಶೆಟ್ಟಿ ಕಾವು ಮುಂತಾದವರು ಶುಭಹಾರೈಕೆ ಮಾತುಗಳನ್ನಾಡಿದರು.
ಈ ಸಂದರ್ಭದಲ್ಲಿ ಪಿ ಸಿ ಜಯರಾಮ, ಚಂದ್ರ ಕೋಲ್ಚಾರ್, ಧನಂಜಯ ಆಡ್ಪಂಗಾಯ, ಡಾ.ರಘು, ಕೆ ಎಂ ಮುಸ್ತಫ, ರಾಜೀವಿ ಆರ್ ರೈ, ಸುಧಾಕರ್ ರೈ, ಸಂಶುದ್ದೀನ್ ಎಸ್ ಎ ಎಸ್, ಶಾಹುಲ್ ಹಮೀದ್ ಕುತ್ತಮೊಟ್ಟೆ, ಉಮ್ಮರ್ ಕೆ ಎಸ್, ಆದಂ ಹಾಜಿ ಕಮ್ಮಾಡಿ, ರಾಧಾಕೃಷ್ಣ ಕಮ್ಮಾಡಿ,ರಶೀದ್ ಜಟ್ಟಿಪಳ್ಳ, ಅಬ್ದುಲ್ ರಹಿಮಾನ್ ಸಂಕೇಶ್, ಅಶೋಕ್ ಎಡಮಲೆ, ಅಬೂಬಕ್ಕರ್ ಅಡ್ಕಾರ್, ಪಿ ಎಸ್ ಗಂಗಾಧರ್, ಮಹಮ್ಮದ್ ಕೆ ಎಮ್ ಎಸ್, ಹಮೀದ್ ಜನಾತ ಉಪಸ್ಥಿತರಿದ್ದರು.
ಸೂಡ ಅಧ್ಯಕ್ಷ ಕೆ.ಎಂ ಮುಸ್ತಫ, ನಿಝಾರ್ ಶೈನ್, ಕಾರ್ಯಕ್ರಮ ನಿರೂಪಿಸಿದರು, ವಿಶ್ವನಾಥ್ ಕೆ ಟಿ ವಂಧಿಸಿದರು, ಸಿದ್ದೀಕ್ ಕ್ಕೂಕ್ಕೊ,ಸಲೀಮ್ ಪೆರಂಗೋಡಿ,ಶರೀಫ್ ಕಂಠಿ, ಹನೀಫ್ ಕುಂಡಿಲ್ ಸಹಕರಿಸಿದರು,

m

Related Posts