Featured, ಇತರೆ, ಸ್ಥಳೀಯ

ಪುತ್ತೂರು : ಸಂಪ್ಯ ಮೆಡ್ ಲ್ಯಾಂಡ್ ಆಸ್ಪತ್ರೆ ಯಲ್ಲಿ ಬೇಸಿಕ್ ಲೈಫ್ ಸಪೋರ್ಟ್ ತರಬೇತಿ ಮತ್ತು ಆ್ಯಂಬುಲೆನ್ಸ್ ಡ್ರೈವರ್‌ಗಳ ಸಮ್ಮಿಲನ

ಪುತ್ತೂರು, ಅ. 24: ಸಂಪ್ಯ ಕಮ್ಮಾಡಿಯ ಮೆಡ್ ಲ್ಯಾಂಡ್ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ‘ಬೇಸಿಕ್ ಲೈಫ್ ಸಪೋರ್ಟ್’ ತರಬೇತಿ ಕಾರ್ಯಕ್ರಮ ಮತ್ತು ಆ್ಯಂಬುಲೆನ್ಸ್ ಡ್ರೈವರ್‌ಗಳ ಸಮ್ಮಿಲನ ಕಾರ್ಯಕ್ರಮ  ನಡೆಯಿತು.

 “ತುರ್ತು ಪರಿಸ್ಥಿತಿಯಲ್ಲಿ ರೋಗಿಯ ‘ಗೋಲ್ಡನ್ ಹವರ್’ ಅತ್ಯಂತ ಮಹತ್ವದ್ದು. ತ್ವರಿತ ಸ್ಪಂದನೆ ಮತ್ತು ತುರ್ತು ಸೇವೆ ಜೀವ ಉಳಿಸಲು ನಿರ್ಣಾಯಕ ಪಾತ್ರ ವಹಿಸುತ್ತದೆ : ಡಾ. ದೀಪಕ್ ರೈ

ಕಾರ್ಯಕ್ರಮವನ್ನು ಉದ್ಘಾಟಿಸಿದ ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ ಅವರು ಮಾತನಾಡಿ, “ತುರ್ತು ಪರಿಸ್ಥಿತಿಯಲ್ಲಿ ರೋಗಿಯ ‘ಗೋಲ್ಡನ್ ಹವರ್’ ಅತ್ಯಂತ ಮಹತ್ವದ್ದು. ತ್ವರಿತ ಸ್ಪಂದನೆ ಮತ್ತು ತುರ್ತು ಸೇವೆ ಜೀವ ಉಳಿಸಲು ನಿರ್ಣಾಯಕ ಪಾತ್ರ ವಹಿಸುತ್ತದೆ. ಅಡ್ವಾನ್ಸ್ ಲೈಫ್ ಸಪೋರ್ಟ್‌ ಸೌಲಭ್ಯ ಹೊಂದಿರುವ ಆ್ಯಂಬುಲೆನ್ಸ್‌ಗಳು ತಾಲೂಕಿನಲ್ಲಿ ಅಲ್ಪ ಸಂಖ್ಯೆಯಲ್ಲಿವೆ, ಅದಕ್ಕಾಗಿ ವೈದ್ಯಕೀಯ ತುರ್ತುಸೇವೆಯ ಬಲವರ್ಧನೆ ಅಗತ್ಯ,” ಎಂದು ಹೇಳಿದರು

ಆರ್ಯಾಪು ಗ್ರಾಮ ಪಂಚಾಯತ್ ಪಿಡಿಒ ನಾಗೇಶ್ ಎಂ. ಅವರು ಮಾತನಾಡಿ, “ಮೆಡ್ ಲ್ಯಾಂಡ್ ಆಸ್ಪತ್ರೆ ವಿದೇಶದ ಮಟ್ಟದ ಆರೋಗ್ಯ ಸೇವೆ ನೀಡುತ್ತಿರುವ ಸಂಸ್ಥೆಯಾಗಿದೆ. ಆಸ್ಪತ್ರೆಯ ಅಧ್ಯಕ್ಷ ಡಾ. ಆಶ್ರಫ್ ಕಮ್ಮಾಡಿ ಅವರ ಸೇವಾ ಮನೋಭಾವ ಪ್ರಶಂಸನೀಯ,” ಎಂದರು

ಕಾರ್ಯಕ್ರಮದಲ್ಲಿ ಡಾ. ದೀಪಕ್ ರೈ ಅವರಿಗೆ ಸನ್ಮಾನ ಸಲ್ಲಿಸಲಾಯಿತು. ಕೆ.ಎಂ.ಸಿ. ಆಸ್ಪತ್ರೆಯ ಡಾ. ಅನಿಕೇತ್ ಶೆಟ್ಟಿ ಅವರು ಬೇಸಿಕ್ ಲೈಫ್ ಸಪೋರ್ಟ್ ಕುರಿತು ಕಾರ್ಯಾಗಾರ ನಡೆಸಿಕೊಟ್ಟರು.

ಆಸ್ಪತ್ರೆಯ ಚೇರ್‌ಮನ್ ಡಾ. ಆಶ್ರಫ್ ಕಮ್ಮಾಡಿ, ನಿರ್ದೇಶಕ ಆದ್ರಾಮ್ ಇಬ್ರಾಹಿಂ, ಕಾನೂನು ಸಲಹೆಗಾರ ಮೂಸ ಕುಂಞ ಪೈಂಬಚ್ಚಾಲ್, ಅಕೌಂಟೆಂಟ್ ಅಬ್ದುಲ್ ಅಜೀಜ್ ಉಪಸ್ಥಿತರಿದ್ದರು.
ವಿಧಿಶಾ ಸ್ವಾಗತಿಸಿ, ಪಿಆರ್‌ಒ ಅಬ್ದುಲ್ ರಝಾಕ್ ಕಾರ್ಯಕ್ರಮವನ್ನು ನಿರ್ವಹಿಸಿದರು.

 

 

 

 

Related Posts