ಸುಳ್ಯ ತಾಲ್ಲೂಕು ಆಲೆಟ್ಟಿ ಗ್ರಾಮ ವ್ಯಾಪ್ತಿಯ ಕೋಳ್ಚಾರು ಎಂಬಲ್ಲಿ ಮನೆ ಹೊರಭಾಗದಲ್ಲಿ ಇರಿಸಿದ್ದ ಚಪ್ಪಲಿಯೊಳಗೆ ಅವಿತುಕೊಂಡಿದ್ದ ಹಾವು ಕಚ್ಚಿ ಮಹಿಳೆಯೊಬ್ಬರು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.
ಮಹಿಳೆ ಬೆಳಗಿನ ಜಾವ ಮನೆಯ ಹೊರಗೆ ಇರಿಸಲಾಗಿದ್ದ ಚಪ್ಪಲಿಯನ್ನು ಧರಿಸಿದ ಸಂಧರ್ಭದಲ್ಲಿ ಚಪ್ಪಲಿಯ ಒಳಗೆ ಅವಿತು ಕೊಂಡಿರುವುದು ಗಮನಕ್ಕೆ ಬಂದಿರಲಿಲ್ಲ
ನಂತರದಲ್ಲಿ ತಕ್ಷಣ ಇವರನ್ನು ಸುಳ್ಯದ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಇದೀಗ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿದುಬಂದಿದೆ.
ಸುಳ್ಯ ತಾಲೂಕು ಆಲೆಟ್ಟಿ ಗ್ರಾಮದ ಕೋಲ್ಚಾರಿನ ವಿನುತಾ ಎಂಬವರು ಆಸ್ಪತ್ರೆಗೆ ದಾಖಲಾದ ಮಹಿಳೆ.





m
