ಪುತ್ತೂರು: ಪುತ್ತೂರು ತಾಲೂಕಿನ ಬೆಟ್ಟಂಪಾಡಿಯಲ್ಲಿ ಮುಸಲ್ಮಾನ ಮಹಿಳೆಯರ ಬಗ್ಗೆ ಕೀಳಾಗಿ ಮಾತನಾಡಿ ಮಹಿಳೆಯರ ಘನತೆಗೆ ದಕ್ಕೆ ತಂದು ಪರಸ್ಪರ ಧರ್ಮ ಧರ್ಮಗಳ ಮಧ್ಯೆ ಎತ್ತಿಕಟ್ಟಿ ಕೋಮು ಧ್ವೇಷ ಹರಡಿ ಸಮಾಜದ ಸ್ವಾಸ್ಥ್ಯ ಕೆಡಿಸುವಂತಹ ಭಾಷಣ ಮಾಡಿದ ಪ್ರಭಾಕರ ಭಟ್ಟನ ವಿರುದ್ಧ ಹೇಳಿಕೆ ನೀಡಲು ಪುತ್ತೂರು ಶಾಸಕರಿಗೆ ಯಾರ ಆಜ್ಞೆ ಬರಬೇಕಾಗಿದೆ? ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪುತ್ತೂರು ವಿಧಾನಸಭಾ ಕ್ಷೇತ್ರಾಧ್ಯಕ್ಷ ಅಶ್ರಫ್ ಬಾವು ಪ್ರಶ್ನಿಸಿದ್ದಾರೆ.
ದ್ವೇಷ ಭಾಷಣ ಮಾಡುವವರ ವಿರುದ್ಧ ಸುಮೊಟೋ ಪ್ರಕರಣ ದಾಖಲಿಸಬೇಕೆಂಬ ಸುಪ್ರೀಂ ಕೋರ್ಟ್ ನ ಆದೇಶ ಇದ್ದರೂ ಪ್ರಭಾಕರ್ ಭಟ್ ವಿರುದ್ಧ FIR ದಾಖಲು ಮಾಡಲು ಸಾಮಾಜಿಕ ಕಾರ್ಯಕರ್ತೆಯರೊಬ್ಬರು ಮುಂದೆ ಬರಬೇಕಾಯಿತು. ದೂರು ನೀಡಿದ ನಂತರವೇ ಪ್ರಕರಣ ದಾಖಲು ಮಾಡಲಾಯಿತು. ವಿಪರ್ಯಾಸವೆಂದರೆ ನಮ್ಮ ಪುತ್ತೂರಿನ ಡೈಲಾಗ್ ಕಿಂಗ್ ಶಾಸಕ ತನ್ನ ಕ್ಷೇತ್ರದಲ್ಲಿ ನಡೆದ ದ್ವೇಷ ಭಾಷಣದ ವಿರುದ್ಧ ಯಾವುದೇ ಡೈಲಾಗ್ ಇಲ್ಲದೆ ಮೌನ ಪ್ರಾರ್ಥನೆಯಲ್ಲಿ ಮುಳುಗಿರುವುದನ್ನು ಕಾಣುವಾಗ ಸಂಘಪ್ರೇಮದ ರಾಜಕೀಯದ ಮುಂದುವರಿದ ಭಾಗ ಎಂಬುದು ಸ್ಪಷ್ಟವಾಗುತ್ತದೆ. ಅಹಿತಕರ ಘಟನೆ ನಡೆಸಿದವರ ಮೇಲೆ ಗುಂಡು ಹಾರಿಸಲು ಆದೇಶಿಸುವ ಶಾಸಕರು , ಈ ವಿಷಯಕ್ಕೆ ಏನು ಹೇಳುತ್ತಾರೆ? ಎಂಬುದು ಸ್ಪಷ್ಟಪಡಿಸಬೇಕು.
ಅದಲ್ಲದೇ ಗಾಳಿಗಿಂತ ವೇಗವಾಗಿ ಪತ್ರಿಕಾಗೋಷ್ಠಿ ನಡೆಸಲು ತಾಕತ್ತಿರುವ ಪುತ್ತೂರಿನ ಅಲ್ಪ ಸಂಖ್ಯಾತ ಘಟಕದ ನಾಯಕರು ಈ ವಿಚಾರದಲ್ಲಿ ಬಾಯಿಗೆ ಬೀಗ ಜಡಿದು ಕುಳಿತುಕೊಂಡಿದ್ದಾರೆ. ಘಟನೆಯ ಸತ್ಯಾಸತ್ಯತೆ ಅರಿಯದೆ ಶಾಸಕರ ತಾಳಕ್ಕೆ ತಕ್ಕಂತೆ ಕುಣಿದು ಪತ್ರಿಕಾಗೋಷ್ಠಿ ನಡೆಸಿ ಮುಜುರಗಕ್ಕೀಡಾದವರು ಕೂಡ ಈ ಪ್ರಭಾಕರ ಭಟ್ಟನ ವಿರುಧ್ದ ಪತ್ರಿಕಾಗೋಷ್ಠಿ ಕರೆಯಲಿ ಎಂದು ಎಸ್ ಡಿ ಪಿ ಐ ಪುತ್ತೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷರಾದ ಅಶ್ರಫ್ ಬಾವುರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





m

