Featured, ಇತರೆ, ಸ್ಥಳೀಯ

ಮುಅಲ್ಲಿಂ ಅವಾರ್ಡ್ ಪಡೆದ ಲತೀಫ್ ಸಖಾಫಿ ಗೂನಡ್ಕ ರವರಿಗೆ ಸುಳ್ಯ ರೇಂಜ್ ಅಭಿನಂದನೆ

ಸಮಸ್ತ ಸೆಂಟಿನರಿ ಪ್ರಯುಕ್ತ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಎಸ್ ಜೆ ಎಂ ರಾಜ್ಯ ಸಮಿತಿ ಸಾಧಕ ಮುಅಲ್ಲಿಮರನ್ನು ಗುರುತಿಸಿ ಗೌರವಾರ್ಪಣೆಯಾಗಿ ನೀಡಿದ ‘ಮುಅಲ್ಲಿಂ ಅವಾರ್ಡ್ ‘ಪಡೆದ ಎಸ್ ಜೆ ಎಂ ಸುಳ್ಯ ರೇಂಜ್ ಪ್ರಧಾನ ಕಾರ್ಯದರ್ಶಿ,ಬುಸ್ತಾನುಲ್ ಉಲೂಂ ಮದ್ರಸ ಜಟ್ಟಿಪಳ್ಳದ ಸದರ್ ಮುಅಲ್ಲಿಂ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ರವರನ್ನು ಸುಳ್ಯ ರೇಂಜ್ ಅದ್ಯಾಪಕ ಒಕ್ಕೂಟದಿಂದ ಮುಅಲ್ಲಿಂ ಮೆಹರ್ಜಾನ್ ಕಾರ್ಯಕ್ರಮದಲ್ಲಿ ಆತ್ಮೀಯವಾಗಿ ಅಭಿನಂದಿಸಲಾಯಿತು.
ಈ ಸಂಧಂರ್ಭ ಸುನ್ನೀ ಜಂಇಯ್ಯತುಲ್ ಉಲಮಾ ಸುಳ್ಯ ಝೋನ್ ಅಧ್ಯಕ್ಷರಾದ ಅಸ್ಸೆಯ್ಯಿದ್ ಯು ಎಸ್ ಕುಂಞ್ಞೆಕೋಯ ತಂಙಳ್ ಸಅದಿ ಸುಳ್ಯ,ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಎಸ್ ಜೆ ಎಂ ಸುಳ್ಯ ರೇಂಜ್ ಅಧ್ಯಕ್ಷ ಅಬೂಬಕ್ಕರ್ ಹಂದಾನಿ ಬದಿಯಡ್ಕ,ಸುನ್ನೀ ಮಾನೇಜ್ ಮೆಂಟ್ ಅಸೋಸಿಯೇಶನ್ ಎಸ್ ಎಂ ಎ ಸುಳ್ಯ ರೀಜ್ಯನಲ್ ಅಧ್ಯಕ್ಷ ಅಬ್ದುಲ್ ಹಮೀದ್ ಸುಣ್ಣಮೂಲೆ,ಕರ್ನಾಟಕ ಮುಸ್ಲಿಂ ಜಮಾಅತ್ ಕೆ ಎಂ ಜೆ ಸುಳ್ಯ ಝೋನ್ ಅಧ್ಯಕ್ಷ  ಅಬ್ದುಲ್ ಹಮಿದ್ ಬಜಕೊಚ್ಚಿ,ಮುಅಲ್ಲಿಂ ಮೆಹರ್ಜಾನ್ ಪ್ರೋಗ್ರಾಂ ಕಮಿಟಿ ಜನರಲ್ ಕನ್ವೀನರ್ ಸಿರಾಜುದ್ದೀನ್ ಸಖಾಫಿ ಗಾಂಧಿನಗರ,ಅಹ್ಮದುಲ್ ಬದವೀ ಜುಮಾ ಮಸ್ಜಿದ್ ಸುಣ್ಣಮೂಲೆ ಅಧ್ಯಕ್ಷ ಬಾಪುಚ್ಚ,ಖತೀಬ್ ಹೈದರ್ ಅಲಿ ಸಅದಿ ಕುಕ್ಕಿಲ,ಪೂರ್ವಾಧ್ಯಕ್ಷ ಅಬ್ದುರ್ರಹ್ಮಾನ್ ಸಅದಿ ಸುಣ್ಣಮೂಲೆ,ಎಸ್ ಎಂ ಎ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಫೈಝಲ್ ಝುಹ್ರಿ ಕಲ್ಲುಗುಂಡಿ ಹಾಗೂ ರೇಂಜ್ ಪದಾಧಿಕಾರಿಗಳು,ಮಅಲ್ಲಿಂ ಉಸ್ತಾದರುಗಳು ಉಪಸ್ಥಿತರಿದ್ದರು

Related Posts