Featured, ಅಂಕಣ, ಸ್ಥಳೀಯ

ದೊಡ್ಡಬಳ್ಳಾಪುರ: ಮುಸ್ಲಿಂ ಯೂತ್ ಅಸೋಸಿಯೇಷನ್‌ಗೆ ಸೆಲೆಕ್ಷನ್ ಬೇಡ – ಎಲೆಕ್ಷನ್ ಬೇಕು: ಮುಸ್ಲಿಂ ಮುಖಂಡರ ಆಗ್ರಹ

ದೊಡ್ಡಬಳ್ಳಾಪುರ ಮುಸ್ಲಿಂ ಯೂತ್ ಅಸೋಸಿಯೇಷನ್‌ಗೆ ಸೆಲೆಕ್ಷನ್ ಪ್ರಕ್ರಿಯೆಯ ಬದಲಿಗೆ ಚುನಾವಣೆ ನಡೆಸಬೇಕು ಎಂದು ಮುಸ್ಲಿಂ ಮುಖಂಡರು ಆಗ್ರಹಿಸಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಂಜೂಮುಣ್ ಕಮಿಟಿಯ ಮಾಜಿ ಸದಸ್ಯರು ಹಾಗೂ SDPI ಪಕ್ಷದ ತಾಲೂಕು ಪ್ರಧಾನ ಕಾರ್ಯದರ್ಶಿ ನೂರ್ ಅಹಮದ್ ಅವರು, “ದೇಶದ ಸಂವಿಧಾನವನ್ನೇ ಕಾಲಾನುಗುಣವಾಗಿ ತಿದ್ದುಪಡಿ ಮಾಡಲಾಗುತ್ತಿದೆ. ಆದರೆ ಬೈಲಾದಲ್ಲಿರುವ ಸಣ್ಣ ಲೋಪವನ್ನು ಕಾರಣವಿಟ್ಟು ಅಡಾಪ್ಟ್ ಕಮಿಟಿಗಳನ್ನೇ ಮುಂದುವರಿಸುತ್ತಿದ್ದಾರೆ. ತಾಲ್ಲೂಕಿನ ಸಮಗ್ರ ಮುಸ್ಲಿಂ ಸಮುದಾಯವನ್ನು ಪ್ರತಿನಿಧಿಸಬೇಕಾದ ವಕ್ಫ್‌ಬೋರ್ಡ್ ಕೆಲವರ ಹಿತಾಸಕ್ತಿಗಳಿಗೆ ಮಣಿದುಕೊಳ್ಳುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“13 ವರ್ಷಗಳಿಂದ ಚುನಾವಣೆಯನ್ನು ನಡೆಸದಿರುವುದು ಅನ್ಯಾಯವಾಗಿದೆ. ಸಮಾಜದ್ರೋಹಿಗಳು ಹಾಗೂ ಅಡಾಪ್ಟ್ ಕಮಿಟಿಗಳು ಇಷ್ಟಾರಾಜ್ಯದಿಂದ ಅಧಿಕಾರ ನಡೆಸುತ್ತಿದ್ದು, ಸಮಾಜದ ಅಭಿವೃದ್ಧಿಗೆ ಅಡ್ಡಿಯಾಗಿದೆ. ನಗರದ ಕೇವಲ ಎರಡು ವಾರ್ಡ್‌ಗಳಿಗೆ ಮಾತ್ರ ಚುನಾವಣೆ ನಡೆಸಲು ಮುಂದಾಗಿರುವುದು ಅಸಮರ್ಪಕ” ಎಂದು ಅವರು ಆರೋಪಿಸಿದರು.

ಮುಸ್ಲಿಂ ಯೂತ್ ಅಸೋಸಿಯೇಷನ್‌ನ ಕೊನೆಯ ಚುನಾವಣೆ ಸುಮಾರು 13 ವರ್ಷಗಳ ಹಿಂದೆ ನಡೆದಿತ್ತು.

ಈ ಪತ್ರಿಕಾಗೋಷ್ಠಿಯಲ್ಲಿ ಫಯಾಜ್, ಇಮ್ರಾನ್ ಹಾಗೂ ಕಾರ್ಯದರ್ಶಿ ಇಲ್ಯಾಜ್ ಉಪಸ್ಥಿತರಿದ್ದರು.

m

Related Posts