ಕಲ್ಲುಗುಂಡಿ: ಇಲಾಲ್ ಬ್ಯಾಡ್ಮಿಂಟನ್ ಸೀಸನ್ – ಪಂದ್ಯಾಟವು ನವೆಂಬರ್ 2 ರಂದು ಸಂಪಾಜೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಭಾವೈಕ್ಯತೆಯಿಂದ ನೆರವೇರಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರ್ಕಾರದ ಕಾರ್ಮಿಕ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ. ಎಂ. ಶಹೀದ್ ತೆಕ್ಕಿಲ್, ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುಮತಿ ಶಕ್ತಿವೇಲ್, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ. ಕೆ. ಹಮೀದ್, ಕೊಡಗು ಜಿಲ್ಲಾ ಯುವ ಕಾಂಗ್ರೆಸ್ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಹನೀಫ್ ಎಸ್.ಪಿ. ನವೀನ್ ಗೂನಡ್ಕ, ಸಾಜಿದ್ ಐ.ಜಿ., ಶರೀಫ್ ಶೆಟ್ಟಿಯಾಡ್ಕ ಮತ್ತು ಅನೇಕ ಕ್ರೀಡಾಭಿಮಾನಿಗಳು, ಕ್ರೀಡಾಪಟುಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಪಂದ್ಯಾಟದ ವೇಳೆ ಕಾರ್ಮಿಕ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ. ಎಂ. ಶಹೀದ್, ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುಮತಿ ಶಕ್ತಿವೇಲ್ ಹಾಗೂ ಮಾಜಿ ಅಧ್ಯಕ್ಷ ಜಿ. ಕೆ. ಹಮೀದ್ ರವರಿಗೆ ಸನ್ಮಾನಿಸಲಾಯಿತು.
ಫಲಿತಾಂಶ:
🔹 A ಗ್ರೇಡ್ — ಕಬೀರ್ ಮತ್ತು ಜುನೈದ್ ಚಾಂಪಿಯನ್, ಅಮೀರ್ ಮತ್ತು ಕ್ರಿಸ್ಟೋಫರ್ ರನ್ನರ್, ಸಿ.ಕೆ. ಹಾರಿಸ್ ಮತ್ತು ರಿನ್ಸನ್ ತೃತೀಯ ಸ್ಥಾನ ಪಡೆದರು.
🔹 B ಗ್ರೇಡ್ — ನಿಝಾಮ್ ಮತ್ತು ಶಮಾಲ್ ಚಾಂಪಿಯನ್, ಸಮೀರ್ ಮತ್ತು ರಫೀಕ್ ರನ್ನರ್, ಹಸೈನಾರ್ ಮತ್ತು ರುಶೈದ್ ತೃತೀಯ ಸ್ಥಾನ ಪಡೆದರು.

ಇಲಾಲ್ ಬ್ಯಾಡ್ಮಿಂಟನ್ ಸಂಘಟಕರಾದ ಉಮ್ಮರ್ ತಾಜ್, ಸಿ.ಕೆ. ಹಾರಿಸ್, ಹಾಗೂ ಮಿರ್ಷಾದ್ ರವರು ಪಂದ್ಯಾಟವನ್ನು ಅತ್ಯಂತ ಶಿಸ್ತಿನಿಂದ ಹಾಗೂ ಸುಸೂತ್ರವಾಗಿ ನಡೆಸಿ ಯಶಸ್ವಿಯಾಗಿ ಸಮಾಪ್ತಿಗೊಳಿಸಿದರು, ಧನ್ರಾಜ್ ಹಾಗೂ ಹಸೈನಾರ್ ಕಾರ್ಯಕ್ರಮವನ್ನು ನಿರೂಪಿಸಿದರು.





m

