ಸುಳ್ಯ ತಾಲೂಕು ಆಲೆಟ್ಟಿ ಗ್ರಾಮದ ಕೊಲ್ಚಾರ್ ನವಜ್ಯೋತಿ ಯುವಕ ಮಂಡಲ ವತಿಯಿಂದ, ಯುವಜನ ಸಂಯುಕ್ತ ಮಂಡಳಿ (ರಿ) ಸುಳ್ಯ ಇದರ ಪಂಚ ಸಪ್ತತಿ ಕಾರ್ಯಕ್ರಮದ ಯೋಜನೆಯಂತೆ ದಿನಾಂಕ 12/11/2025 ರ ಬುಧವಾರದಂದು ಪೈ0ಬೆಚ್ಚಾಲು ಅಂಗನವಾಡಿ ಕೇಂದ್ರದ ಸುತ್ತಮುತ್ತ ಇದ್ದ ಕಾಡನ್ನು ಹೆರೆದು ಸ್ವಚ್ಚತೆಯನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಯುವಜನ ಸಂಯುಕ್ತ ಮಂಡಳಿ ಇದರ ಉಪಾಧ್ಯಕ್ಷರಾದ ದಯಾನಂದ ಪಾತಿಕಲ್ಲು, ನವಜ್ಯೋತಿ ಯುವಕ ಮಂಡಲ ಇದರ ಅಧ್ಯಕ್ಷರಾದ ಧರ್ಮಪಾಲ ಕೊಯ0ಗಾಜೆ, ಸದಸ್ಯರುಗಳಾದ ಯತೀಶ್ ಬಳ್ಯಾಡಿ, ನಿಸಾರ್ ತೋಟಕೊಚ್ಚಿ, ಧನು ಕೊಲ್ಚಾರು, ಪಿ ಎಂ ರಫೀಕ್, ಹಸೈನಾರ್ ಕೂಲಿಯಡ್ಕ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಜಲಜಾಕ್ಷಿ ಕೊಯಿಂಗಜೆ, ಅಂಗನವಾಡಿ ಸಹಾಯಕಿ, ಹಾಗೂ ಪುಟಾಣಿ ಮಕ್ಕಳ ತಾಯಂದಿರು ಉಪಸ್ಥಿತರಿದ್ದರು.





m
