Featured, ಅಂಕಣ, ಸ್ಥಳೀಯ

ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ವಿಕಾಮ್ ಟೀಮ್ ಸುಳ್ಯದ ವತಿಯಿಂದ ವಿದ್ಯಾರ್ಥಿ ವೇತನದ ಮಾಹಿತಿ ಕಾರ್ಯಾಗಾರ

SSP, NSP ಸರಕಾರದಿಂದ ಹಾಗೂ ಸರಕಾರೇತರವಾಗಿ ವಿದ್ಯಾರ್ಥಿಗಳಿಗೆ ಸಿಗುವ ವಿದ್ಯಾರ್ಥಿವೇತನದ ಸಂಪೂರ್ಣ ಮಾಹಿತಿ ಹಾಗೂ ಅರ್ಜಿ ಸಲ್ಲಿಸುವುದಕ್ಕಾಗಿ, ವಿದ್ಯಾರ್ಥಿವೇತನದ ಹಣ ಮಂಜೂರಾಗದವರು ಹಾಗೂ ಎಲ್ಲಾ ರೀತಿಯ ಗೊಂದಲ ನಿವಾರಣೆಗಾಗಿ ಒಂದು ದಿನದ ಕಾರ್ಯಾಗಾರವನ್ನು ದಿನಾಂಕ:15/11/2025 ಶನಿವಾರ ತಾಲೂಕು ಪಂಚಾಯತ್ ಸಭಾಂಗಣ ಸುಳ್ಯದಲ್ಲಿ ಹಮ್ಮಿಕೊಂಡಿದ್ದರು. ಈ ಕಾರ್ಯಾಗಾರದ ಸದುಪಯೋಗವನ್ನು ಹೆಚ್ಚಿನ‌ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಆಗಮಿಸಿ ಪಡೆದುಕೊಂಡರು.

ಈ ಸಂದರ್ಭದಲ್ಲಿ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ತಾಲೂಕು ಮಾಹಿತಿ ಕೇಂದ್ರದ ಸಿಬ್ಬಂದಿಗಳಾದ ಕಮಾಲ್, ವಿಷ್ಣುವರ್ಧನ್ ಸಮಾಜಕಲ್ಯಾಣ ಇಲಾಖೆಯ ಸಿಬ್ಬಂದಿಯಗಳಾದ ಕೃಷ್ಣ ಬಿ(ಸಹಾಯಕ ನಿದೇಶಕರು)ಪ್ರನೀತ್ ಕುಮಾರ್, ಸೀತಾ ಕಮಾರಿ, ಕಿರಣ್ ಹಾಗೂ ವಿ ಕಾಮ್ ಟೀಮ್ ನ ಅರುಣ್ ಹಾಗೂ ಮುಕೇಶ್ ರವರು ಉಪಸ್ಥಿತಿಯಿದ್ದು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.

m

Related Posts