ಎಸ್ಡಿಪಿಐ ಸಂಪಾಜೆ ಘಟಕದಲ್ಲಿ ರಾಜೀನಾಮೆಯ ಸಿಡಿಲು!
ಸುಳ್ಯ ವಿಧಾನಸಭಾ ಕ್ಷೇತ್ರದ ಅರಂಬೂರು–ಸಂಪಾಜೆ ಬ್ರಾಂಚ್ನಲ್ಲಿ ರಾಜಕೀಯ ತಾಪಮಾನ ಏರಿಕೆಯಾಗಿದೆ. ಬ್ರಾಂಚ್ ಉಪಾಧ್ಯಕ್ಷ ಸಾಜಿದ್ ಐ.ಜಿ. ಹಾಗೂ ಕೋಶಾಧಿಕಾರಿ ಸಿದ್ದಿಕ್ ದೊಡ್ಡಡ್ಕ ಅವರ ನೇತೃತ್ವದಲ್ಲಿದ್ದ ನಶ್ಫಾನ್, ಲುಕ್ಮಾನ್, ಸಿದ್ದಿಕ್ ಮೂಲೆ ಮತ್ತು ಇನ್ನಿತರ ಸದಸ್ಯರ ತಂಡವು ಪಕ್ಷದ ಸೈದ್ಧಾಂತಿಕ ಭೇದಾಭಿಪ್ರಾಯಗಳನ್ನು ಉಲ್ಲೇಖಿಸಿ ಎಸ್ಡಿಪಿಐ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಏಕಾಏಕಿ ರಾಜೀನಾಮೆ ಹಾಕಿ ರಾಜಕೀಯ ವಲಯದಲ್ಲಿ ಸಂಚಲನ ತಂದಿದ್ದಾರೆ.
ಪಕ್ಷದ ಕೆಂಪು–ಹಸಿರು ಧ್ವಜದಡಿ ವರ್ಷಗಳಿಂದ ಕಾರ್ಯನಿರ್ವಹಿಸಿದ್ದ ಈ ನಾಯಕರು ಈಗ ಹೊಸ ದಾರಿಯತ್ತ ಹೆಜ್ಜೆ ಇಡಲು ತಯಾರಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.
“ಮುಂದಿನ ನಮ್ಮ ರಾಜಕೀಯ ನಿಲುವು ಶೀಘ್ರದಲ್ಲೇ ಪ್ರಕಟಿಸಲಾಗುತ್ತದೆ” ಎಂದು ರಾಜೀನಾಮೆ ತಂಡ ಸ್ಪಷ್ಟ ಸಂದೇಶ ಹೊರಡಿಸಿದ್ದು, ಇದರ ಪರಿಣಾಮವಾಗಿ ಸ್ಥಳೀಯ ರಾಜಕೀಯದಲ್ಲಿ ಹಲವು ಊಹಾಪೋಹಗಳು ಗಾಳಿಯಲ್ಲಿ ತೇಲುತ್ತಿವೆ.
ಸಂಪಾಜೆ ಘಟಕದಲ್ಲಿ ಮುಂದೇನು ನಡೆಯಲಿದೆ? ಯಾರು ಯಾರತ್ತ ಸಾಗುತ್ತಿದ್ದಾರೆ?ಸ್ಥಳೀಯ ರಾಜಕೀಯವೇ ಈಗ ದೊಡ್ಡ ಪ್ರಶ್ನಾರ್ತಕಚಿಹ್ನೆಯ ಮುಂದೆ ನಿಂತಿದೆ.





m

